ADVERTISEMENT

ಬುಡಕಟ್ಟು ಮಂಡಳಿ–ಟಿಟಿಪಿ ಮಾತುಕತೆ ಬಿಕ್ಕಟ್ಟಿನಲ್ಲಿ ಕೊನೆ

ಪಿಟಿಐ
Published 1 ಆಗಸ್ಟ್ 2022, 16:44 IST
Last Updated 1 ಆಗಸ್ಟ್ 2022, 16:44 IST

ಇಸ್ಲಾಮಾಬಾದ್:ಅಫ್ಗಾನಿಸ್ತಾನದಲ್ಲಿ ಪಾಕಿಸ್ತಾನದ ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಬುಡಕಟ್ಟು ಮಂಡಳಿಯ ನಾಯಕರ 17 ಸದಸ್ಯರ ನಿಯೋಗಮತ್ತು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ನಡುವಿನ ಮಾತುಕತೆ ಬಿಕ್ಟಟ್ಟಿನಲ್ಲಿ ಕೊನೆಗೊಂಡಿತು.

ಇದು ಪ್ರಕ್ಷುಬ್ಧ ಗಡಿ ಪ್ರದೇಶದಲ್ಲಿ ಸುಮಾರು ಎರಡು ದಶಕಗಳ ಹೊರಾಟ ಕೊನೆಗೊಳಿಸಲು ಪಾಕಿಸ್ತಾನದ ಸರ್ಕಾರದ ಪ್ರಯತ್ನಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಹಿಂದಿನ ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶಗಳನ್ನು ಖೈಬರ್ ಪಖ್ತುಂಕ್ವಾ ಪ್ರಾಂತ್ಯದೊಂದಿಗೆ ವಿಲೀನಗೊಳಿಸುವ ತನ್ನ ಬೇಡಿಕೆಯಿಂದ ಹಿಂದೆ ಸರಿಯಲು ಉಗ್ರಗಾಮಿ ಸಂಘಟನೆ ನಿರಾಕರಿಸಿದ ನಂತರ ಬಿಕ್ಕಟ್ಟು ತಲೆದೋರಿದೆ. ಒಂದು ವೇಳೆ ಶಾಂತಿ ಒಪ್ಪಂದ ಕಾರ್ಯರೂಪಕ್ಕೆ ಬಂದರೆ ಶಸ್ತ್ರಾಸ್ತ್ರ ತ್ಯಜಿಸಲು ಸಂಘಟನೆ ನಿರಾಕರಿಸಿದೆ ಎಂದುಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ಸೋಮವಾರ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.