ADVERTISEMENT

ಟಿವಿ ರಿಮೋಟ್‌ಗಿಂತ ಚಿಕ್ಕದಾದ ನಾಯಿ; ಗಿನ್ನಿಸ್‌ ದಾಖಲೆ ಪುಸ್ತಕಕ್ಕೆ ಸೇರ್ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಏಪ್ರಿಲ್ 2023, 12:53 IST
Last Updated 11 ಏಪ್ರಿಲ್ 2023, 12:53 IST
ಚಿತ್ರ ಕೃಪೆ : ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ (Twitter/@GWR)
ಚಿತ್ರ ಕೃಪೆ : ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ (Twitter/@GWR)   

ಇಟಲಿ : ಜಗತ್ತಿನ ಅತೀ ಚಿಕ್ಕ ನಾಯಿ ಎಂದು ಹೆಸರು ಪಡೆದು ಗಿನ್ನಿಸ್ ದಾಖಲೆಗೆ ಸೇರಿದ ಎರಡು ವರ್ಷದ ಚಿಹೋವಾ ತಳಿಗೆ ಸೇರಿದ ‘ಪರ್ಲ್‌‘ ನಾಯಿ ಟಿವಿ ರಿಮೋಟ್‌ಗಿಂತಲೂ ಚಿಕ್ಕದಾಗಿದೆ.ಈ ನಾಯಿ ಜಗತ್ತಿನ ಅತೀ ಚಿಕ್ಕ ಮಹಿಳೆ ಭಾರತ ಮೂಲದ ಜ್ಯೋತಿ ಆಮ್ನೆ ಅವರಿಗಿಂತ ಏಳು ಪಟ್ಟು ಚಿಕ್ಕದಾಗಿದೆ ಎಂದು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ತಿಳಿಸಿದೆ.

ಈ ಹಿಂದೆ ಈ ದಾಖಲೆಯನ್ನು ಪರ್ಲ್‌ ಸಂಬಂಧಿ ಮಿರಾಕಲ್‌ ಮಿಲ್ಲಿ(9.65 ಸೆ.ಮೀ) ಹೊಂದಿತ್ತು. ಈ ನಾಯಿ ಇತ್ತೀಚೆಗೆ ಸಾವನ್ನಪ್ಪಿದ್ದು, ಗಿನ್ನಿಸ್‌ ದಾಖಲೆ ಪಟ್ಟ ಪರ್ಲ್‌ ಪಡೆದುಕೊಂಡಿದೆ. ಈ ಎರಡು ನಾಯಿಯ ಮಾಲೀಕರು ಒಬ್ಬರೇ ಆಗಿದ್ಧಾರೆ. ಪರ್ಲ್‌ ಐಸ್‌ಕ್ಯಾಂಡಿ ಕೋಲಿಗಿಂತ ಚಿಕ್ಕದಾಗಿದ್ದು, 9.14 ಸೆಂಟಿ ಮೀಟರ್‌ ಎತ್ತರ, 12.7 ಸೆಂಟಿ ಮೀ ಉದ್ದ, 553 ಗ್ರಾಂ ತೂಕವನ್ನು ಹೊಂದಿದೆ.

‘ಪರ್ಲ್‌ ಮಾಲೀಕರಾರುವುದಕ್ಕೆ ನಮಗೆ ತುಂಬಾ ಹೆಮ್ಮೆಯಾಗುತ್ತಿದೆ. ಮೊದಲು ಮಿಲ್ಲಿ ಈ ದಾಖಲೆಯನ್ನು ಹೊಂದಿತ್ತು, ಈಗ ಪರ್ಲ್‌. ನಮ್ಮ ದಾಖಲೆಯನ್ನು ನಾವೇ‘ ಮುರಿದಿದ್ದೇವೆ‘ ಎಂದು ಪರ್ಲ್‌ ಗಿನ್ನೆಸ್‌ ದಾಖಲೆ ಪುಸ್ತಕ ಸೇರಿರುವುದಕ್ಕೆ ಮಾಲೀಕರು ಸಂತೋಷ ವ್ಯಕ್ತಪಡಿಸಿದ್ದಾರೆ.

ADVERTISEMENT

ಚಿಹೋವಾ ತಳಿ ನಾಯಿಗಳು ವಿಶ್ವದ ಅತೀ ಚಿಕ್ಕ ತಳಿಗಳಾಗಿವೆ. ಅತ್ಯಂತ ಸೂಕ್ಷ್ಮಮತಿಯಾದ ಇವುಗಳು ಅಪಾರ್ಟ್‌ಮೆಂಟ್‌/ಫ್ಲ್ಯಾಟ್‌ಗಳಲ್ಲಿ ಬದುಕಲು ಯೋಗ್ಯವಾಗಿವೆ. ಮೆಕ್ಸಿನ್‌ನ ಚಿಹೋವಾ ಮೂಲದ ಈ ನಾಯಿಗಳು ತುಂಬಾ ಬೇಗನೆ ಮನುಷ್ಯರೊಂದಿಗೆ ಹೊಂದಿಕೊಳ್ಳುತ್ತವೆ. ಮಕ್ಕಳಿಗೆ ಅತ್ಯಂತ ಪ್ರಿಯಾವಾದ ನಾಯಿ ಇದಾಗಿದೆ. ಇವುಗಳ ಜೀವಿತಾವಧಿ 12ರಿಂದ 13 ವರ್ಷ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.