ADVERTISEMENT

ಚಾಕೊಲೆಟ್‌ ಕಾರ್ಖಾನೆಯಲ್ಲಿ ಸ್ಫೋಟ: 5 ಸಾವು, 6 ಮಂದಿ ನಾಪತ್ತೆ

ಏಜೆನ್ಸೀಸ್
Published 25 ಮಾರ್ಚ್ 2023, 18:28 IST
Last Updated 25 ಮಾರ್ಚ್ 2023, 18:28 IST
ಸ್ಫೋಟಗೊಂಡಿರುವ ಚಾಕೊಲೆಟ್‌ ಕಾರ್ಖಾನೆಯಿಂದ ಹೊರಸೂಸುತ್ತಿರುವ ಹೊಗೆ (ಚಿತ್ರ– ಎಪಿ/ಪಿಟಿಐ) 
ಸ್ಫೋಟಗೊಂಡಿರುವ ಚಾಕೊಲೆಟ್‌ ಕಾರ್ಖಾನೆಯಿಂದ ಹೊರಸೂಸುತ್ತಿರುವ ಹೊಗೆ (ಚಿತ್ರ– ಎಪಿ/ಪಿಟಿಐ)    

ಪೆನ್ಸಿಲ್ವೇನಿಯಾ: ಇಲ್ಲಿನ ಚಾಕೊಲೆಟ್‌ ಕಾರ್ಖಾನೆಯಲ್ಲಿ ಶುಕ್ರವಾರ ಸ್ಫೋಟಗೊಂಡು ಐವರು ಮೃತಪಟ್ಟಿದ್ದು, ಆರು ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌.ಎಂ.ಪಾಮರ್ ಕಂಪನಿಯ ಸ್ಥಾವರ ಸ್ಫೋಟಗೊಂಡಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ವೆಸ್ಟ್‌ ರಿಡಿಂಗ್‌ ಬರೋದ ಪೊಲೀಸ್‌ ವಿಭಾಗದ ಮುಖ್ಯಸ್ಥ ವೇನ್ ಹಾಲ್ಬೆನ್‌ ತಿಳಿಸಿದ್ದಾರೆ.

ಸಂಜೆ 5 ಗಂಟೆಗೂ ಮೊದಲು ಸ್ಫೋಟ ಕಾಣಿಸಿಕೊಂಡಿದ್ದು, ನಂತರ ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿರುವ ಕಟ್ಟಡಗಳಿಗೂ ವ್ಯಾಪಿಸಿತು. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.