ವಾಷಿಂಗ್ಟನ್: ‘ನ್ಯಾಟೊ’ಗೆ ನಿಯೋಜಿಸಿದ್ದ ತನ್ನ ಪ್ರತಿನಿಧಿಯನ್ನು ವಜಾ ಮಾಡಲಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಮಂಗಳವಾರ ಖಚಿತಪಡಿಸಿದೆ. ಈ ಮೂಲಕ, ಡೊನಾಲ್ಡ್ ಟ್ರಂಪ್ ಆಡಳಿತವು ಸೇನೆಯ ಆಯಕಟ್ಟಿನ ಹುದ್ದೆಯಲ್ಲಿದ್ದ ಹಿರಿಯ ಅಧಿಕಾರಿಗಳ ವಜಾ ಮಾಡುವುದನ್ನು ಮುಂದುವರಿಸಿದೆ.
‘ನೌಕಾದಳದ ವೈಸ್ ಅಡ್ಮಿರಲ್ ಶೊಶಾನ ಚಾಟ್‌ಫೀಲ್ಡ್ ಅವರನ್ನು ‘ನ್ಯಾಟೊ’ದ ಸೇನಾ ಸಮಿತಿಯ ಅಮೆರಿಕ ಪ್ರತಿನಿಧಿ ಸ್ಥಾನದಿಂದ ವಜಾಗೊಳಿಸಲಾಗಿದೆ. ಶೊಶಾನ ಅವರು ಜವಾಬ್ದಾರಿ ನಿಭಾಯಿಸುವ ದೃಢ ವಿಶ್ವಾಸ ತೋರದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಭದ್ರತಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.