ADVERTISEMENT

ಲಕ್ಷದ್ವೀಪದಲ್ಲಿ ಅಭ್ಯಾಸ ನಡೆಸಿದ್ದನ್ನು ಸಮರ್ಥಿಸಿಕೊಂಡ ಅಮೆರಿಕ

‘ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಕಾರ್ಯಾಚರಣೆ’

ಪಿಟಿಐ
Published 10 ಏಪ್ರಿಲ್ 2021, 7:32 IST
Last Updated 10 ಏಪ್ರಿಲ್ 2021, 7:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ಭಾರತ ಅನುಮತಿ ಪಡೆಯದೇ, ಆ ದೇಶದ ವಿಶೇಷ ಆರ್ಥಿಕ ವಲಯದಲ್ಲಿ ಅಭ್ಯಾಸ ನಡೆಸಿದ ತಮ್ಮ ನೌಕಪಾಡೆಗಳ ಕ್ರಮವನ್ನು ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್‌) ಸಮರ್ಥಿಸಿಕೊಂಡಿದ್ದು, ಇದು ‘ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿದೆ‘ ಎಂದು ಪ್ರತಿಪಾದಿಸಿದೆ.

‘ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಯೇ ಯುದ್ಧವಿಮಾನಗಳ ಹಾರಾಟ, ನೌಕೆಗಳ ಸಂಚಾರವನ್ನು ಮುಂದುವರಿಸಲಾಗುವುದು’ ಎಂದು ಇಲಾಖೆಯ ವಕ್ತಾರ ಜಾನ್‌ ಕಿರ್ಬಿ ಹೇಳಿದ್ದಾರೆ.

ADVERTISEMENT

ಅಮೆರಿಕ ನೌಕಾಪಡೆಗಳು ಭಾರತಕ್ಕೆ ಮೀಸಲಾದ ವಿಶೇಷ ಆರ್ಥಿಕ ವಲಯದಲ್ಲಿ (ಇಇಝೆಡ್) ಭಾರತದ ಪೂರ್ವಾನುಮತಿ ಇಲ್ಲದೆ ‘ಸ್ವತಂತ್ರ ಸಂಚಾರ ಕಾರ್ಯಾಚರಣೆ’ ನಡೆಸಿದ್ದಾಗಿ ನೌಕಾಪಡೆಯ ‘ಸೆವೆಂತ್‌ ಫ್ಲೀಟ್‌’ ಕಮಾಂಡರ್‌ ಬುಧವಾರ ಹೇಳಿಕೆ ಬಿಡುಗಡೆ ಮಾಡಿತ್ತು.

ಅಮೆರಿಕದ ಈ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದ ಭಾರತ, ‘ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಮಾರ್ಗದ ಮೂಲಕ ಅಮೆರಿಕಕ್ಕೆ ಮಾಹಿತಿಯನ್ನು ತಲುಪಿಸಿದೆ‘’ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.