ಪೆಂಟಗನ್: ವಾಷಿಂಗ್ಟನ್ ಡಿಸಿಯಲ್ಲಿರುವ ಅಮೆರಿಕದ ಸುರಕ್ಷಿತ ಮಿಲಿಟರಿ ಪ್ರಧಾನ ಕಚೇರಿಯ ಹೊರಭಾಗದಲ್ಲಿರುವ ಸಬ್‌ವೇ ಮೆಟ್ರೋ ನಿಲ್ದಾಣದಲ್ಲಿ ಗುಂಡಿನ ಚಕಮಕಿ ನಡೆದಿದೆ. ನಂತರ, ಕೂಡಲೇ ಪೆಂಟಗನ್‌ನಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ.
ನಿಲ್ದಾಣದಲ್ಲಿ ಗುಂಡಿನ ಚಕಮಕಿ ಮತ್ತು ಹಲವರು ಗಾಯಗೊಂಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ನ ಅರ್ಲಿಂಗ್ಟನ್ ಉಪನಗರದಲ್ಲಿರುವ ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯಲ್ಲಿನ ಉದ್ಯೋಗಿಗಳಿಗೆ ನಿಲ್ದಾಣದಲ್ಲೇ ಆಶ್ರಯ ಪಡೆಯುವಂತೆ ಆದೇಶಿಸಲಾಯಿತು, ಇದರ ಪ್ರವೇಶ ದ್ವಾರವು ಕಟ್ಟಡದ ಮುಖ್ಯ ಬಾಗಿಲುಗಳಿಂದ ಕೆಲವೇ ಡಜನ್ ಗಜಗಳಷ್ಟು (ಮೀಟರ್) ದೂರದಲ್ಲಿದೆ.
‘ಪೆಂಟಗನ್ ಟ್ರಾನ್ಸಿಟ್ ಸೆಂಟರ್‌ನಲ್ಲಿ ನಡೆದ ಘಟನೆಯಿಂದಾಗಿ ಪೆಂಟಗನ್ ಲಾಕ್‌ಡೌನ್ ಆಗಿದೆ. ದಯವಿಟ್ಟು ಈ ಪ್ರದೇಶವನ್ನು ತಪ್ಪಿಸುವಂತೆ ನಾವು ಸಾರ್ವಜನಿಕರನ್ನು ಕೇಳುತ್ತಿದ್ದೇವೆ.’ ಎಂದು ಪೆಂಟಗನ್‌ನ ಭದ್ರತಾ ಪಡೆ ಟ್ವೀಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಸ್ಥಳೀಯ ವಾರ್ತಾ ಕೇಂದ್ರ ಡಬ್ಲ್ಯುಯುಎಸ್‌ಎ, ಕಟ್ಟಡದಲ್ಲಿ ಭಾರೀ ಭದ್ರತೆ ಮತ್ತು ಅಗ್ನಿಶಾಮಕದಳ ಹಾಗೂ ರಕ್ಷಣಾ ವಾಹನಗಳ ಜಮಾವಣೆಯ ಚಿತ್ರವನ್ನು ತೋರಿಸಿದೆ.
ತಕ್ಷಣಕ್ಕೆ ಯಾವುದೇ ಸಾವು, ಗಾಯಾಳುಗಳ ಬಗ್ಗೆ ವರದಿ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.