ADVERTISEMENT

ಮೆಕ್ಸಿಕೊದಲ್ಲಿ ಕುಸಿದ ಚರ್ಚ್ ಮೇಲ್ಚಾವಣಿ: 10 ಜನ ಸಾವು

ಎಪಿ
Published 2 ಅಕ್ಟೋಬರ್ 2023, 15:56 IST
Last Updated 2 ಅಕ್ಟೋಬರ್ 2023, 15:56 IST
<div class="paragraphs"><p>ಉತ್ತರ ಮೆಕ್ಸಿಕೊದ ಕ್ಯೂಡಾಡ್ ಮ್ಯಾಡಿರೊ ನಗರದಲ್ಲಿ ಭಾನುವಾರದ ಪ್ರಾರ್ಥನೆ ವೇಳೆ ಕುಸಿದ ಚರ್ಚ್ ಒಂದರ ಮೇಲ್ಚಾವಣಿ ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವುದು </p></div>

ಉತ್ತರ ಮೆಕ್ಸಿಕೊದ ಕ್ಯೂಡಾಡ್ ಮ್ಯಾಡಿರೊ ನಗರದಲ್ಲಿ ಭಾನುವಾರದ ಪ್ರಾರ್ಥನೆ ವೇಳೆ ಕುಸಿದ ಚರ್ಚ್ ಒಂದರ ಮೇಲ್ಚಾವಣಿ ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವುದು

   

ಕ್ಯೂಡಾಡ್ ಮ್ಯಾಡಿರೊ (ಮೆಕ್ಸಿಕೊ): ಉತ್ತರ ಮೆಕ್ಸಿಕೊದಲ್ಲಿ ಭಾನುವಾರದ ಪ್ರಾರ್ಥನೆ ಸಂದರ್ಭದಲ್ಲಿ ಚರ್ಚ್‌ನ ಮೇಲ್ಚಾವಣಿ ಕುಸಿದು, 10 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಸುಮಾರು 60 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ತಿಳಿಸಿದ್ದಾರೆ. 

ಈ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ ಭದ್ರತಾ ವಕ್ತಾರ, ಚರ್ಚ್‌ನ ವಿನ್ಯಾಸದ ಲೋಪದಿಂದಾಗಿ ಮೇಲ್ಚಾವಣಿ ಕುಸಿದಿರುವ ಸಾಧ್ಯತೆಯಿದೆ. ಚರ್ಚ್‌ನಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಾರ್ಥನೆ ಮಾಡುತ್ತಿದ್ದಾಗ, ಈ ಘಟನೆ ನಡೆದಿದೆ. ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಅವಶೇಷಗಳಡಿ ಸಿಲುಕಿದ್ದ 60 ಮಂದಿ ಗಾಯಾಳುಗಳನ್ನು ರಕ್ಷಿಸಲಾಗಿದೆ. ಈ ಪೈಕಿ 23 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.