ADVERTISEMENT

ಭಾರತದಿಂದ ಆಮದಾದ ಸರಕುಬಳಕೆ– ಪಾಕ್‌ ಸರ್ಕಾರಕ್ಕೆ ಮನವಿ

ಪಾಕ್‌ ಸರ್ಕಾರಕ್ಕೆ ವರ್ತಕರ ಮನವಿ

ಪಿಟಿಐ
Published 18 ಆಗಸ್ಟ್ 2019, 20:00 IST
Last Updated 18 ಆಗಸ್ಟ್ 2019, 20:00 IST
   

ಇಸ್ಲಾಮಾಬಾದ್‌ : ದೇಶದ ವಿಮಾನ ನಿಲ್ದಾಣ ಹಾಗೂ ಬಂದರು ಗಳಲ್ಲಿ ದಾಸ್ತಾನು ಮಾಡಲಾಗಿರುವ ಭಾರತದಿಂದ ಆಮದು ಮಾಡಿಕೊಂಡ ಸರಕುಗಳ ಮಾರಾಟಕ್ಕೆ ಅನುಮತಿ ನೀಡುವಂತೆ ಎಂಪ್ಲಾಯರ್ಸ್‌ ಫೆಡರೇ ಷನ್‌ ಆಫ್‌ ಪಾಕಿಸ್ತಾನ (ಇಎಫ್‌ಪಿ) ಸರ್ಕಾರಕ್ಕೆ ಮನವಿ ಮಾಡಿದೆ.

ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ಭಾರತ ರದ್ದು ಮಾಡಿದ ಬೆನ್ನಲ್ಲೇ, ಪಾಕಿಸ್ತಾನ ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು ಸ್ಥಗಿತಗೊಳಿ ಸಿದೆ. ಇದರ ಪರಿಣಾಮವಾಗಿ, ಭಾರತ ದಿಂದ ಆಮದು ಮಾಡಿಕೊಂಡಿರುವ ಸರಕುಗಳು ಸ್ಥಳೀಯ ಮಾರುಕಟ್ಟೆ, ಸಂಬಂಧಿಸಿದ ಕಂಪನಿಗಳನ್ನೇ ತಲುಪಿಲ್ಲ.

‘ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಸ್ವಾಗತಿಸಿರುವ ಇಎಫ್‌ಪಿ, ಈಗಾಗಲೇ ಆಮದಾದ ಸರಕುಗಳನ್ನು ಮಾರಾಟ ಮಾಡಲು, ಉಪಯೋಗಿಸಲು ಅನುಮತಿ ನೀಡು ವಂತೆ ಮನವಿ ಮಾಡಿದೆ’ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ADVERTISEMENT

ಜೀವರಕ್ಷಕ ಔಷಧಿಗಳ ತಯಾರಿಕೆಗೆ ಅಗತ್ಯವಿರುವ ರಾಸಾಯನಿಕ ವಸ್ತು ಗಳನ್ನು ಪಾಕಿಸ್ತಾನವು ಭಾರತದಿಂದ ಆಮದು ಮಾಡಿಕೊಳ್ಳುತ್ತದೆ. ಉಭಯ ದೇಶಗಳ ನಡುವಿನ ಸಂಬಂಧ ಈಗ ಹಳಸಿದ್ದು, ದೇಶದಲ್ಲಿ ಜೀವರಕ್ಷಕ ಔಷಧಿಗಳ ಕೊರತೆ ಕಾಣಿಸಿಕೊಂಡಿದೆ.

‘ಭಾರತದಿಂದ ತರಿಸಿಕೊಂಡಿರುವ ರಾಸಾಯನಿಕ ವಸ್ತುಗಳನ್ನು ಈಗ ಉಪ ಯೋಗಿಸಬೇಕು. ಆದರೆ, ಈ ಕಚ್ಚಾವಸ್ತುಗಳ ಪೂರೈಕೆಗೆಔಷಧಿ ಕಂಪನಿ ಗಳು ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡ ಬೇಕು ಎಂಬ ಷರತ್ತು ವಿಧಿಸಿ, ಅನುಮತಿ ನೀಡಬೇಕು’ ಎಂದು ಇಎಫ್‌ಪಿ ಉಪಾ ಧ್ಯಕ್ಷ ಝಕಿ ಅಹ್ಮದ್‌ ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.