ADVERTISEMENT

ಫೈಝರ್‌ ಲಸಿಕೆ: ತುರ್ತು ಬಳಕೆಗೆ ಅಮೆರಿಕದ ಎಫ್‌ಡಿಎ ಅನುಮತಿ

ಏಜೆನ್ಸೀಸ್
Published 11 ಡಿಸೆಂಬರ್ 2020, 1:45 IST
Last Updated 11 ಡಿಸೆಂಬರ್ 2020, 1:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್ಟನ್‌: ಕೋವಿಡ್‌–19 ವಿರುದ್ಧ ಪರಿಣಾಮಕಾರಿ ಲಸಿಕೆಯಾಗಿ ಗುರುತಿಸಿಕೊಂಡಿರುವ ಫೈಝರ್ ಲಸಿಕೆ ಬಳಕೆಗೆ ಅಮೆರಿಕದ ‘ಫುಡ್‌ ಆ್ಯಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌’(ಎಫ್‌ಡಿಎ) ಅನುಮತಿ ನೀಡಿದೆ.

ಗುರುವಾರ ನಡೆದ ಎಫ್‌ಡಿಎ ವಿಭಾಗದ ತಜ್ಞರ ಲಸಿಕೆ ಸಲಹಾ ಮಂಡಳಿಯು ಲಸಿಕೆ ಪರಿಣಾಮದ ಬಗ್ಗೆ ಚರ್ಚೆ ನಡೆಸಿತು. ನಂತರ ತುರ್ತುಬಳಕೆಯ ಅಂತಿಮ ನಿರ್ಧಾರದ ಬಗ್ಗೆ ಮತಕ್ಕೆ ಹಾಕಲಾಯಿತು. 17 ಮತಗಳು ತುರ್ತುಬಳಕೆಯ ಪರವಾಗಿ ಹಾಗೂ 4 ಮತಗಳು ವಿರುದ್ಧವಾಗಿ ಚಲಾವಣೆಯಾದವು ಒಬ್ಬರು ಗೈರು ಆಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಲಭ್ಯವಿರುವ ದತ್ತಾಂಶಗಳು, ವೈಜ್ಞಾನಿಕ ಪುರಾವೆಗಳ ಸಮಗ್ರತೆಯ ಆಧಾರದ ಮೇಲೆ, ಫೈಝರ್ ಲಸಿಕೆ16 ವರ್ಷ ಮತ್ತು ಮೇಲ್ಪಟ್ಟ ವ್ಯಕ್ತಿಗಳಲ್ಲಿ ಅಪಾಯಕ್ಕಿಂತ ಹೆಚ್ಚು ಪ್ರಯೋಜನಗಳನ್ನು ಹೊಂದಿದೆ ಎಂಬುದು ಪ್ರಾಥಮಿಕ ಹಂತದಲ್ಲಿ ತಿಳಿದಿರುವುದರಿಂದ ತುರ್ತುಬಳಕೆಗೆ ಅನುಮೋದಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

ADVERTISEMENT

ಮಂಡಳಿಯು ಲಸಿಕೆ ಬಳಕೆಗೆ ಒಪ್ಪಿಗೆ ನೀಡಿರುವುದರಿಂದ ಲಕ್ಷಾಂತರ ಡೋಸ್‌ಗಳನ್ನು ಆಮದು ಮಾಡಿಕೊಳ್ಳಲು ಅಮೆರಿಕ ಸಜ್ಜಾಗಿದೆ.

ಬ್ರಿಟನ್, ಕೆನಾಡ, ಬಹ್ರೇನ್ ಮತ್ತು ಸೌದಿ ಅರೇಬಿಯಾ ದೇಶಗಳು ಈಗಾಗಲೇ ತುರ್ತು ಬಳಕೆಗೆ ಅನುಮೋದನೆ ನೀಡಿವೆ. ಫೈಝರ್‌ ಲಸಿಕೆಯ ತುರ್ತು ಬಳಕೆಯ ಬಗೆಗಿನ ಪ್ರಸ್ತಾವನೆ ಭಾರತ ಸರ್ಕಾರದ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.