ADVERTISEMENT

ಪೋಲೆಂಡ್‌, ಸಿಂಗಪುರ: ಮಾಸ್ಕ್‌ ಕಡ್ಡಾಯ ಅಂತ್ಯ

ರಾಯಿಟರ್ಸ್
Published 24 ಮಾರ್ಚ್ 2022, 13:33 IST
Last Updated 24 ಮಾರ್ಚ್ 2022, 13:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಾರ್ಸಾ: ಪೋಲೆಂಡ್‌ನಲ್ಲಿ ಕಡ್ಡಾಯ ಮಾಸ್ಕ್‌ ಧರಿಸುವಿಕೆ ಮತ್ತು ಕ್ವಾರಂಟೈನ್‌ ನಿಯಮವನ್ನು ಮಾರ್ಚ್‌ 28ರಿಂದ ರದ್ದುಗೊಳಿಸಲಾಗುವುದು ಎಂದು ದೇಶದ ಆರೋಗ್ಯ ಸಚಿವ ಆಡಮ್‌ ನಿಡಿಜಿಲ್‌ಸ್ಕಿ ಗುರುವಾರ ಹೇಳಿದ್ದಾರೆ.

ಆದರೆ, ಆರೋಗ್ಯ ಕೇಂದ್ರಗಳಲ್ಲಿ ಮಾಸ್ಕ್‌ ಧರಿಸಬೇಕು. ಹೋಂ ಐಸೋಲೇಷನ್‌ ಮತ್ತು ಸೋಂಕಿತರ ಸಂಪರ್ಕದಲ್ಲಿ ಇದ್ದವರಿಗೆ ಹಾಗೂ ಪ್ರಯಾಣಿಕರಿಗೆ ವಿಧಿಸಲಾಗಿದ್ದ ಕ್ವಾರಂಟನ್‌ ನಿಯಮವನ್ನು ತೆಗೆದು ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿದಾಗಿನಿಂದ 20 ಲಕ್ಷ ನಿರಾಶ್ರಿತರು ಪೋಲೆಂಡ್‌ಗೆ ವಲಸೆ ಬಂದಿದ್ದಾರೆ. ಇದರಿಂದ ಕೋವಿಡ್‌ ಪ್ರಕರಣಗಳು ಹೆಚ್ಚಾಗಿಲ್ಲ ಎಂದೂ ತಿಳಿಸಿದ್ದಾರೆ.

ADVERTISEMENT

ಸಿಂಗಪುರದಲ್ಲಿ ವಿದೇಶ ಪ್ರಯಾಣಕ್ಕೆ ಅವಕಾಶ

ಸಿಂಗಪುರ (ಪಿಟಿಐ): ಓಮೈಕ್ರಾನ್‌ ಸೋಂಕು ನಿಯಂತ್ರಣದಲ್ಲಿ ಇರುವುದರಿಂದ ಏಪ್ರಿಲ್‌ 1 ರಿಂದ ವಿದೇಶ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಹಾಗೂ ಮಾರ್ಚ್‌ 29ರಿಂದಹೊರಾಂಗಣದಲ್ಲಿ ಮಾಸ್ಕ್‌ ಧರಿಸುವುದುಕಡ್ಡಾಯವಲ್ಲ ಎಂದು ಸಿಂಗಪುರ ಪ್ರಧಾನಿ ಲೀ ಸೀನ್‌ ಲೂಂಗ್‌ ಹೇಳಿದ್ದಾರೆ.

ಪ್ರಯಾಣಿಕರಿಗೆ ಕೋವಿಡ್‌ ಪತ್ತೆ ಪರೀಕ್ಷೆ, ಕ್ವಾರಂಟೈನ್‌ ಮತ್ತು ಲಸಿಕೆ ನಿಯಮವನ್ನು ಸಡಿಲಗೊಳಿಸಿ ಕೋವಿಡ್‌ ಪೂರ್ವದಲ್ಲಿ ಇದ್ದ ವ್ಯವಸ್ಥೆಯೊಂದಿಗೆ ವಿದೇಶ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ಸಿಂಗಾಪುರ ಭೇಟಿ ನೀಡುವವರು ಕಡ್ಡಾಯವಾಗಿ ಸಂಪೂರ್ಣ ಲಸಿಕೆ ಪಡೆದಿರಬೇಕು ಎಂಬ ನಿಯಮವನ್ನು ರದ್ದುಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.