ADVERTISEMENT

ನ್ಯೂಜಿಲೆಂಡ್‌: ಪಾರ್ಲಿಮೆಂಟ್‌ ದ್ವಾರ ಮುರಿಯಲು ಯತ್ನ, ಆರೋಪಿಯ ಬಂಧನ

ಏಜೆನ್ಸೀಸ್
Published 13 ಜನವರಿ 2021, 5:43 IST
Last Updated 13 ಜನವರಿ 2021, 5:43 IST
ನ್ಯೂಜಿಲ್ಯಾಂಡ್‌ನ ಸಂಸತ್‌ ಭವನ
ನ್ಯೂಜಿಲ್ಯಾಂಡ್‌ನ ಸಂಸತ್‌ ಭವನ   

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ ಸಂಸತ್‌ ಭವನದ ಗಾಜಿನ ಮುಖ್ಯ ದ್ವಾರವನ್ನು ವ್ಯಕ್ತಿಯೊಬ್ಬ ಕೊಡಲಿಯಿಂದ ಒಡೆದಿದ್ದಾನೆ. ಆದರೆ ಆತ ಕಟ್ಟಡದೊಳಗೆ ಪ್ರವೇಶಿಸಲು ಯತ್ನಿಸಿಲ್ಲ ಎಂದು ಪೊಲೀಸರು ತಿಳಿಸಿದರು.

‘ವೆಲ್ಲಿಂಗ್ಟನ್‌ನ ಕಟ್ಟವೊಂದ‌ರಲ್ಲಿ ವ್ಯಕ್ತಿಯೊಬ್ಬ ಕೊಡಲಿಯನ್ನು ಹಿಡಿದು ಓಡಾಡುತ್ತಿದ್ದಾನೆ ಎಂದು ಬುಧವಾರ ಬೆಳಿಗ್ಗೆ 5.25ಕ್ಕೆ ನಮಗೆ ಕರೆ ಬಂದಿತ್ತು. ಇದರ 10 ನಿಮಿಷಗಳ ಬಳಿಕ ನಾವು ಆರೋಪಿಯನ್ನು ಬಂಧಿಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ನ್ಯೂಜಿಲೆಂಡ್‌ನ 120 ಜನಪ್ರತಿನಿಧಿಗಳು ಸದ್ಯ ಬೇಸಿಗೆ ವಿರಾಮದಲ್ಲಿದ್ದಾರೆ. ಹಾಗಾಗಿ ಕಟ್ಟಡದಲ್ಲಿ ಸ್ವಲ್ಪ ಜನ ಮಾತ್ರ ಇದ್ದರು. ಬಂಧಿತನ ವಿರುದ್ಧ ಉದ್ದೇಶಪೂರ್ವಕ ಹಾನಿ ಮತ್ತು ಅಪಾಯಕಾರಿ ಶಸ್ತ್ರಾಸ್ತ್ರವನ್ನು ಹೊಂದಿ‌ದ್ದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಆರೋಪ ಸಾಬೀತಾದಲ್ಲಿ ಆತ 7 ವರ್ಷ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.