ADVERTISEMENT

ಪಾಕಿಸ್ತಾನ: ಬಡತನದಿಂದ ಬೇಸತ್ತು ಐವರು ಮಕ್ಕಳನ್ನು ಕಾಲುವೆಗೆ ಎಸೆದ ತಂದೆ

ಏಜೆನ್ಸೀಸ್
Published 6 ಡಿಸೆಂಬರ್ 2020, 9:58 IST
Last Updated 6 ಡಿಸೆಂಬರ್ 2020, 9:58 IST
ಸಾಂದರ್ಭಿಕ ಚಿತ್ರ – ಎಎನ್‌ಐ
ಸಾಂದರ್ಭಿಕ ಚಿತ್ರ – ಎಎನ್‌ಐ   

ಲಾಹೋರ್: ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರು ಐವರು ಮಕ್ಕಳನ್ನು ಕಾಲುವೆಗೆ ಎಸೆದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಲಾಹೋರ್‌ನ ಪಟ್ಟೋಕಿಯಲ್ಲಿರುವ ಜಾಂಬರ್ ಕಾಲುವೆಗೆ ಮಕ್ಕಳನ್ನು ಎಸೆಯಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ.

ಒಂದು ವರ್ಷ ವಯಸ್ಸಿನ ಅಹ್ಮದ್ ಮತ್ತು 4 ವರ್ಷ ವಯಸ್ಸಿನ ಫಿಜಾ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂಸ್ ಇಂಟರ್‌ನ್ಯಾಷನಲ್’ ವರದಿ ಮಾಡಿದೆ.

ಬಡತನದಿಂದ ಹತಾಶೆಗೊಂಡಿರುವ ವ್ಯಕ್ತಿಯು ಪತ್ನಿಯ ಜತೆ ಜಗಳ ನಡೆದ ಬಳಿಕ ಮಕ್ಕಳನ್ನು ಕಾಲುವೆಗೆ ಎಸೆಯುವ ನಿರ್ಧಾರ ಕೈಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೂರು ವರ್ಷ ವಯಸ್ಸಿನ ತಾಶಾ, ಐದು ವರ್ಷ ವಯಸ್ಸಿನ ಝೈನ್ ಹಾಗೂ ಏಳು ವರ್ಷ ವಯಸ್ಸಿನ ನಾದಿಯಾ ಅವರ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.