ADVERTISEMENT

27.1 ಕೋಟಿ ಜನರ ಬಡತನ ನಿವಾರಣೆ: ವಿಶ್ವಸಂಸ್ಥೆಯ ವರದಿ

ಭಾರತದಲ್ಲಿ ಸುಧಾರಿಸಿದ ಜೀವನಮಟ್ಟ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 20:00 IST
Last Updated 12 ಜುಲೈ 2019, 20:00 IST
.
.   

ವಿಶ್ವಸಂಸ್ಥೆ:2006ರಿಂದ 2016ರವರೆಗೆ ಭಾರತದಲ್ಲಿ 27.1 ಕೋಟಿ ಜನರ ಬಡತನ ಸಮಸ್ಯೆ ನಿವಾರಣೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ಭಾರತದಲ್ಲಿಈ ಅವಧಿಯಲ್ಲಿ ಆಸ್ತಿ, ಅಡುಗೆ ಇಂಧನ, ನೈರ್ಮಲ್ಯ ಹಾಗೂ ಪೌಷ್ಟಿಕತೆಯಂತಹ ವಿಭಾಗಗಳಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಬಡತನ ಸೂಚ್ಯಂಕದಲ್ಲಿ ಏಕಾಏಕಿ ಇಳಿಕೆ ದಾಖಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದಾಯವೊಂದೇ ಪರಿಗಣಿಸಿಲ್ಲ

ADVERTISEMENT

ಎಂಪಿಐ ವರದಿಗೆ ಜನರ ಆದಾಯವೊಂದನ್ನೇ ಪರಿಗಣಿಸಲಾಗಿಲ್ಲ. ಆರೋಗ್ಯ ಸೌಲಭ್ಯ, ಪೌಷ್ಠಿಕತೆ, ನೈರ್ಮಲ್ಯ, ಶಿಶುಮರಣ ಪ್ರಮಾಣ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ಸೂರು, ವಿದ್ಯಾಭ್ಯಾಸ, ಗುಣಮಟ್ಟದ ಕೆಲಸದ ಲಭ್ಯತೆ ಮುಂತಾದ ಸೂಚಕ ಪರಿಗಣಿಸಲಾಗಿದೆ.

ಶೇ 55.1 ಇದ್ದ ಬಡತನ

ಭಾರತದಲ್ಲಿ 2005–06ರಲ್ಲಿ 64 ಕೋಟಿ (ಶೇ 55.1)ಜನರು ಬಹುಆಯಾಮದ ಬಡತನ ಸಮಸ್ಯೆಯಲ್ಲಿ ಜೀವನ ಸಾಗಿಸುತ್ತಿದ್ದರು. 2015–16ರ ವೇಳೆಗೆ ಈ ಪ್ರಮಾಣ 36.9 ಕೋಟಿಗೆ(ಶೇ 27.9)ಇಳಿಕೆಯಾಗಿದೆ.

* ಈ ಪೈಕಿ 88.6 ಕೋಟಿ ಜನ ಮಧ್ಯಮ ಆದಾಯದ ರಾಷ್ಟ್ರದಲ್ಲಿ ಬದುಕುತ್ತಿದ್ದಾರೆ. ಬಡತನ ಸಮಸ್ಯೆ ಇಳಿಮುಖವಾಗಿದೆ ಎನ್ನುವುದನ್ನು ಚಿತ್ರೀಕರಿಸಲು ಒಟ್ಟು 200 ಕೋಟಿ ಜನಸಂಖ್ಯೆಯುಳ್ಳ 10 ರಾಷ್ಟ್ರಗಳನ್ನು ವರದಿಯಲ್ಲಿ ಗುರುತಿಸಲಾಗಿದೆ.

ಬಡತನ ನಿರ್ಮೂಲನೆಯಲ್ಲಿ ಅಭಿವೃದ್ಧಿ ಸಾಧಿಸಿದ ದೇಶಗಳು

ಬಾಂಗ್ಲಾದೇಶ, ಕಾಂಬೋಡಿಯಾ, ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊ, ಇಥಿಯೋಪಿಯಾ, ಹೈಟಿ, ಭಾರತ, ನೈಜೀರಿಯಾ, ಪಾಕಿಸ್ತಾನ, ಪೆರು ಮತ್ತು ವಿಯೆಟ್ನಾಂ

ಪ್ರಮುಖ ಅಂಶಗಳು

* 2014ರಲ್ಲಿ 1.9 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ.

* ಭಾರತದಲ್ಲಿ 2005–06ರಲ್ಲಿ 64 ಕೋಟಿ (ಶೇ 55.1)ಜನರು ಬಡತನದಲ್ಲಿದ್ದರು.

* 2015–16ರ ವೇಳೆಗೆ ಈ ಪ್ರಮಾಣ 36.9 ಕೋಟಿಗೆ (ಶೇ 27.9) ಇಳಿಕೆಯಾಗಿದೆ.

* ಎಂಪಿಐ ವರದಿಗೆ ಆದಾಯವೊಂದನ್ನೇ ಪರಿಗಣಿಸಿಲ್ಲ. ಆರೋಗ್ಯ ಸೌಲಭ್ಯ, ಪೌಷ್ಟಿಕತೆ, ನೈರ್ಮಲ್ಯ, ಶಿಶುಮರಣ ಪ್ರಮಾಣ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ಸೂರು, ವಿದ್ಯಾಭ್ಯಾಸ, ಮುಂತಾದ ಸೂಚಕಗಳನ್ನು ಪರಿಗಣಿಸಲಾಗಿದೆ.

*ಮೂವರಲ್ಲಿ ಒಂದು ಮಗು, ಆರು ಜನರಲ್ಲಿ ಒಬ್ಬ ಬಡತನ ಎದುರಿಸುತ್ತಿದ್ದಾನೆ

*130 ಕೋಟಿ ಬಡವರಲ್ಲಿ 66.3 ಕೋಟಿ ಮಕ್ಕಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.