ADVERTISEMENT

ಪಾಕ್‌: ಸಹಜ ಸ್ಥಿತಿಗೆ ಮರಳಿದ ವಿದ್ಯುತ್‌ ಪೂರೈಕೆ

ಏಜೆನ್ಸೀಸ್
Published 24 ಜನವರಿ 2023, 10:46 IST
Last Updated 24 ಜನವರಿ 2023, 10:46 IST
   

ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ವಿದ್ಯುತ್ ವಿತರಣಾ ಜಾಲದಲ್ಲಿ ಕಂಡುಬಂದಿದ್ದ ಲೋಪ ಸರಿಪಡಿಸಲಾಗಿದ್ದು, ಮಂಗಳವಾರ ವಿದ್ಯುತ್‌ ಪೂರೈಕೆಯು ದೇಶದಾದ್ಯಂತ ಸಹಜ ಸ್ಥಿತಿಗೆ ಮರಳಿತು.

ವಿದ್ಯುತ್‌ ಕಡಿತದಿಂದ ಸೋಮವಾರ ರಾತ್ರಿ ಕೋಟ್ಯಂತರ ಜನರು ಕಗ್ಗತ್ತಲಲ್ಲಿ ಕಳೆದಿದ್ದರು. ಔದ್ಯಮಿಕ ಕ್ಷೇತ್ರಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು ನಷ್ಟವಾಗಿತ್ತು.

ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿಸಿರುವ ಇಂಧನ ಸಚಿವ ಖುರ್ರಂ ದಸ್ತಗೀರ್, ‘ವಿದ್ಯುತ್‌ ವಿತರಣಾ ವ್ಯವಸ್ಥೆ ಸರಿಪಡಿಸಲು ಹೆಚ್ಚಿನ ಹೂಡಿಕೆ ಅಗತ್ಯವಾಗಿದೆ. ದಶಕಗಳಿಂದ ಇದನ್ನು ಕಡೆಗಣಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ವಿದ್ಯುತ್ ಕಡಿತದಿಂದ ಜನರಿಗಾದ ಅನನುಕೂಲತೆಗೆ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.