ADVERTISEMENT

ವಿಶ್ವಸಂಸ್ಥೆಯಲ್ಲಿ ಆಧ್ಯಾತ್ಮಿಕ ಗುರು ಪ್ರಮುಖ್‌ ಸ್ವಾಮಿ ಜನ್ಮಶತಮಾನೋತ್ಸವ ಆಚರಣೆ

ಪಿಟಿಐ
Published 8 ಡಿಸೆಂಬರ್ 2022, 16:22 IST
Last Updated 8 ಡಿಸೆಂಬರ್ 2022, 16:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಆಧ್ಯಾತ್ಮಿಕ ಗುರು ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಜನ್ಮ ಶತಮಾನೋತ್ಸವವನ್ನು ವಿಶ್ವಸಂಸ್ಥೆಯ ಅಧಿಕಾರಿಗಳು ಹಾಗೂ ರಾಜತಾಂತ್ರಿಕರ ಸಮ್ಮುಖದಲ್ಲಿ ಆಚರಿಸಲಾಯಿತು. ಈ ವೇಳೆ, ಪ್ರಮುಖ್‌ ಸ್ವಾಮಿ ಅವರ 'ಜಗತ್ತು ಒಂದು ಕುಟುಂಬ' ಎಂಬ ಸಂದೇಶವನ್ನು ಒತ್ತಿ ಹೇಳಲಾಯಿತು.

ಪ್ರಮುಖ್‌ ಸ್ವಾಮಿ ಅವರ ಜೀವನ ಮತ್ತು ಸೇವೆಯನ್ನು ಕೊಂಡಾಡಿದ ಅಧಿಕಾರಿಗಳು, ‘ಗುರುಗಳು ಸಹಾನುಭೂತಿಯ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ. ಅವರು ಸಮಾಜದ ಅಭಿವೃದ್ಧಿಗಾಗಿ‌ ಜಾಗತಿಕ ಯೋಜನೆಗಳು ಮತ್ತು ಸಾಮಾಜಿಕ-ಆರ್ಥಿಕ ಯೋಜನೆಗಳ ಆರಂಭಕ್ಕೆ ಸ್ಫೂರ್ತಿಯಾಗಿದ್ದಾರೆ’ ಎಂದರು.

ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರಚಾರ ಸಂಸ್ಥೆ ಮತ್ತು ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್‌) ವಿಶ್ವಸಂಸ್ಥೆಯಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.

ADVERTISEMENT

‘ಮಹಾರಾಜ್‌ ಅವರ ಜೀವನವೇ ಒಂದು ಮಾನವೀಯತೆಯ ಸಂದೇಶ. ಅವರ ಜೀವನ ಏಕತೆಯ, ಒಳ್ಳೆಯತನದ, ಶಾಂತಿಯ, ಸಾಮರಸ್ಯದ ಹಾಗೂ ಭ್ರಾತೃತ್ವದ ಸಂದೇಶ. ಅವರನ್ನು ಭಾರತದ ಶ್ರೇಷ್ಠ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ’ ಎಂದು ಭಾರತದ ಕಾಯಂ ಪ್ರತಿನಿಧಿ ಮತ್ತು ವಿಶ್ವಸಂಸ್ಥೆಯ ರಾಯಭಾರಿ ರುಚಿರಾ ಕಾಂಬೋಜ್‌ ಅವರು ಕಾರ್ಯಕ್ರಮದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.