ADVERTISEMENT

ಸ್ಲೊವಾಕಿಯಾ: ರಾಮಾಯಣ ಬೊಂಬೆಯಾಟ ವೀಕ್ಷಿಸಿದ ಮುರ್ಮು

ಪಿಟಿಐ
Published 10 ಏಪ್ರಿಲ್ 2025, 16:09 IST
Last Updated 10 ಏಪ್ರಿಲ್ 2025, 16:09 IST
ಸ್ಲೊವಾಕಿಯಾ ವಿದ್ಯಾರ್ಥಿಗಳು ಪಂಚತಂತ್ರ ಹಾಗೂ ಜಾತಕ ಕತೆಗಳನ್ನು ಆಧರಿಸಿ ರಚಿಸಿದ್ದ ಕಲಾಕೃತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಹನವಾಗಿ ನೋಡಿದರು –ಪಿಟಿಐ ಚಿತ್ರ
ಸ್ಲೊವಾಕಿಯಾ ವಿದ್ಯಾರ್ಥಿಗಳು ಪಂಚತಂತ್ರ ಹಾಗೂ ಜಾತಕ ಕತೆಗಳನ್ನು ಆಧರಿಸಿ ರಚಿಸಿದ್ದ ಕಲಾಕೃತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಹನವಾಗಿ ನೋಡಿದರು –ಪಿಟಿಐ ಚಿತ್ರ   

ಬ್ರಾಟಸ್ಲಾವಾ: ಸ್ಲೊವಾಕಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಸ್ಲೊವಾಕ್‌ ಭಾಷೆಯಲ್ಲಿ ಪ್ರದರ್ಶನ ಕಂಡ ರಾಮಾಯಣ ಬೊಂಬೆಯಾಟವನ್ನು ಗುರುವಾರ ಕಣ್ತುಂಬಿಕೊಂಡರು.

45 ನಿಮಿಷದ ಈ ಬೊಂಬೆಯಾಟವನ್ನು ಸ್ಲೊವಾಕಿಯಾದ ಕೃಷ್ಣ ಭಕ್ತೆ ಲೆಂಕಾ ಮುಕೋವಾ ಅವರು ರಚಿಸಿದ್ದರು. ಮುರ್ಮು ಅವರೊಂದಿಗೆ 150 ವಿದ್ಯಾರ್ಥಿಗಳು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪ್ರದರ್ಶನದಲ್ಲಿ, ರಾವಣ ಸೀತೆಯನ್ನು ಅಪಹರಣ ಮಾಡುವಾಗ ಹಾಗೂ ಹನುಮಂತನು ಲಂಕೆಗೆ ತೆರಳಿದ್ದಾಗ ಆತನನ್ನು ಸೆರೆಹಿಡಿಯಲು ರಾವಣನು ಇಡೀ ಲಂಕೆಗೆ ಬೆಂಕಿ ಹಚ್ಚಿದ ದೃಶ್ಯಗಳನ್ನು ನೋಡಿ ವಿದ್ಯಾರ್ಥಿಗಳು ಭಾವುಕರಾಗಿದ್ದು ಕಂಡುಬಂತು.

ADVERTISEMENT

ಸ್ಲೊವಾಕಿಯಾ ವಿದ್ಯಾರ್ಥಿಗಳು ಪಂಚತಂತ್ರ ಹಾಗೂ ಜಾತಕ ಕತೆಗಳನ್ನು ಆಧರಿಸಿ ರಚಿಸಿದ್ದ ಕಲಾಕೃತಿಗಳನ್ನು ನೋಡಿ ಮುರ್ಮು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.