ADVERTISEMENT

ಸುಳ್ಳು ಹೇಳಿದವರು ಸತ್ತು ಹೋಗಲಿ: ವಿಮಾನ ಉರುಳಿಸಿದವರ ವಿರುದ್ಧ ಇರಾನ್ ಜನರ ಆಕ್ರೋಶ

ಬೀದಿಗಿಳಿದರು ಇರಾನ್ ಜನ: ಖೊಮೇನಿ ರಾಜೀನಾಮೆಗೆ ಆಗ್ರಹ

ಏಜೆನ್ಸೀಸ್
Published 12 ಜನವರಿ 2020, 4:28 IST
Last Updated 12 ಜನವರಿ 2020, 4:28 IST
ಇರಾನ್‌ ರಾಜಧಾನಿ ಟೆಹರಾನ್‌ನಲ್ಲಿ ಶನಿವಾರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ವಿಮಾನ ದುರಂತದಲ್ಲಿ ಮೃತಪಟ್ಟ ನವವಿವಾಹಿತರ ಚಿತ್ರ ಪ್ರದರ್ಶಿಸುತ್ತಿರುವ ಮಹಿಳೆ.
ಇರಾನ್‌ ರಾಜಧಾನಿ ಟೆಹರಾನ್‌ನಲ್ಲಿ ಶನಿವಾರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ವಿಮಾನ ದುರಂತದಲ್ಲಿ ಮೃತಪಟ್ಟ ನವವಿವಾಹಿತರ ಚಿತ್ರ ಪ್ರದರ್ಶಿಸುತ್ತಿರುವ ಮಹಿಳೆ.   
""
""
""

ಟೆಹರಾನ್:ನಾಗರಿಕ ವಿಮಾನ ಹೊಡೆದುರುಳಿಸುವ ಮೂಲಕ 176 ಅಮಾಯಕರ ಸಾವಿಗೆ ಕಾರಣರಾದವರ ವಿರುದ್ಧ ಇರಾನ್ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೀದಿಗಿಳಿದು ಪ್ರತಿಭಟಿಸುತ್ತಿರುವ ಯುವಜನರುಸರ್ವೋಚ್ಚ ನಾಯಕ ಅಯಾತ್‌ಉಲ್ಲಾ ಅಲಿ ಖೊಮೇನಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಟೆಹರಾನ್‌ನ ಅಮೀರ್ ಕಬೀರ್ ವಿಶ್ವವಿದ್ಯಾಲಯದ ಎದುರುನೂರಾರು ಜನರು‘ಕಮಾಂಡರ್ ಇನ್ ಚೀಫ್‌ (ಖೊಮೇನಿ)ರಿಸೈನ್, ರಿಸೈನ್’ ಎಂಬ ಘೋಷಣೆಗಳನ್ನು ಮೊಳಗಿಸುವ ಪ್ರತಿಭಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ.

‘ಇರಾನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದಾಗ ವಿಮಾನದ ಟೇಕಾಫ್‌ಗೆ ಅವಕಾಶಕೊಟ್ಟಿದ್ದೇಕೆ?’ ಎಂದು ಹಲವರು ತಮ್ಮದೇ ಸರ್ಕಾರವನ್ನು ಟೀಕಿಸಿದ್ದಾರೆ. ಹಿಂಸೆಗೆ ಪ್ರಚೋದಿಸುವ ಘೋಷಣೆಗಳನ್ನು ಕೂಗುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಚದುರಿಸಿದರು.

ADVERTISEMENT

‘ಅಮೆರಿಕಕ್ಕೆ ಸಾವು ಬರಲಿ’ ಎಂದು ಘೋಷಣೆ ಕೂಗುತ್ತಿದ್ದ ವಿದ್ಯಾರ್ಥಿಗಳು ಇದೀಗ, ‘ಸುಳ್ಳು ಹೇಳುವವರು ಸತ್ತು ಹೋಗಲಿ’ ಎಂದು ಘೋಷಣೆಗಳನ್ನು ಮೊಳಗಿಸುವ ಮೂಲಕ ತಮ್ಮ ದೇಶದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.

ವಿಮಾನ ದುರಂತದಲ್ಲಿ ಸತ್ತವರ ನೆನಪಿನಲ್ಲಿ ದೀಪ ಹಚ್ಚಿದ ಇರಾನ್‌ ಜನರು

‘ಉಕ್ರೇನ್ ವಿಮಾನವನ್ನುಹೊಡೆದುರುಳಿಸಿದ್ದು ನಾವೇ. ನಮ್ಮಿಂದ ತಪ್ಪಾಗಿದೆ’ ಎಂದು ಇರಾನ್ ಒಪ್ಪಿಕೊಂಡಿತ್ತು. ಅದಕ್ಕೂ ಮೊದಲು ಇರಾನ್ ವಿಮಾನವು ತಾಂತ್ರಿಕ ಸಮಸ್ಯೆಗಳಿಂದ ಪತನಗೊಂಡಿದೆ ಎಂದು ವಾದಿಸಿತ್ತು.

ಕಳೆದ ನವೆಂಬರ್‌ನಲ್ಲಿ ಪೆಟ್ರೊಲ್ ದರ ಹೆಚ್ಚಳ ಮಾಡಿದಾಗ ಇರಾನ್‌ನಲ್ಲಿ ದೊಡ್ಡಮಟ್ಟದ ಪ್ರತಿಭಟನೆಗಳು ನಡೆದಿದ್ದವು. ಇದೀಗನಾಗರಿಕ ವಿಮಾನದಜನರಲ್ಲಿ ಆಕ್ರೋಶದ ಕಿಚ್ಚು ಹೆಚ್ಚಿಸಿದೆ.

ವಿಮಾನ ದುರಂತಕ್ಕೆ ಕಾರಣರಾದವರ ವಿರುದ್ಧ ಘೋಷಣೆ ಕೂಗಿದ ಇರಾನ್ ವಿದ್ಯಾರ್ಥಿಗಳು
ವಿಮಾನ ದುರಂತದಲ್ಲಿ ಮೃತಪಟ್ಟವರ ಚಿತ್ರ ಪ್ರದರ್ಶಿಸಿದ ಪ್ರತಿಭಟನಾಕಾರರು

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.