ADVERTISEMENT

ಜಪಾನ್‌ನಲ್ಲಿ ಭೂಕಂಪನ: ಇಬ್ಬರ ಸಾವು, ಜನ ಜೀವನ ಅಸ್ತವ್ಯಸ್ತ

ರಾಯಿಟರ್ಸ್
Published 17 ಮಾರ್ಚ್ 2022, 22:05 IST
Last Updated 17 ಮಾರ್ಚ್ 2022, 22:05 IST
ಜಪಾನ್‌ನ ಫುಕುಶಿಮಾದಲ್ಲಿ ಸಂಭವಿಸಿದ ಭೂಕಂಪನದಿಂದ ಮನೆ ಕುಸಿದಿರುವುದು
ಜಪಾನ್‌ನ ಫುಕುಶಿಮಾದಲ್ಲಿ ಸಂಭವಿಸಿದ ಭೂಕಂಪನದಿಂದ ಮನೆ ಕುಸಿದಿರುವುದು   

ಟೋಕಿಯೊ: ಜಪಾನ್‌ನ ಈಶಾನ್ಯ ಕರಾವಳಿ ಪ್ರದೇಶ ಫುಕುಶಿಮಾದಲ್ಲಿಬುಧವಾರ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪನಕ್ಕೆ ಇಬ್ಬರು ನಾಗರಿಕರು ಮೃತಪಟ್ಟಿದ್ದು, 162 ಮಂದಿ ಗಾಯಗೊಂಡಿದ್ದಾರೆ.

ಸಾವಿರಾರು ಮನೆಗಳಿಗೆ ವಿದ್ಯುತ್‌, ನೀರು ಸರಬರಾಜು ಕಡಿತವಾಗಿದೆ. ಹೆದ್ದಾರಿಗಳು ಬಿರುಕು ಬಿಟ್ಟಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ಕಂಪನದ ತೀ‌ವ್ರಕ್ಕೆ ಬುಲೆಟ್‌ ರೈಲು ತಳಿ ತಪ್ಪಿದೆ. ಸಾವು–ನೋವು ಸಂಭವಿಸಿಲ್ಲ. ಅನಿರ್ದಿಷ್ಟಾವಧಿಗೆ ಬುಲೆಟ್‌ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಕೆಲ ಹೆದ್ದಾರಿಗಳನ್ನು ಮುಚ್ಚಲಾಗಿದೆ.

ಭೂಕಂಪನ ಹಿನ್ನೆಲೆಯಲ್ಲಿ ಹಲವಾರು ಕಾರ್ಖಾನೆಗಳು ಸ್ಥಗಿತಗೊಂಡಿವೆ. ಇದರ ಪರಿಣಾಮ ಜಗತ್ತಿನಾದ್ಯಂತ ಸ್ಮಾರ್ಟ್‌ ಫೋನ್‌,ವಿದ್ಯುದ್ಮಾನ ಪರಿಕರಗಳು, ಮತ್ತು ಆಟೊಮೊಬೈಲ್ಸ್‌ ಬಿಡಿಭಾಗಗಳ ಪೂರೈಕೆಯ ಮೇಲೂ ಆಗಿದೆ.

ADVERTISEMENT

ರಕ್ಷಣಾ ಕಾರ್ಯ ಚುರುಕುಗೊಂಡಿದೆ. ಫುಕುಶಿಮಾ ಮತ್ತು ಮಿಯಾಗಿಗೆ ಸೇನೆಯ ವಿಪತ್ತು ನಿರ್ವಹಣೆ ಪಡೆಯನ್ನು ನಿಯೋಜಿಸಿದೆ. ಹಾನಿ ಅಂದಾಜಿನ ಸಮೀಕ್ಷೆ ಆರಂಭವಾಗಿದೆ. 11 ವರ್ಷದ ಬಳಿಕ ಸಂಭವಿಸಿದ ಭೀಕರ ಭೂಕಂಪನ ಇದಾಗಿದೆ. 2011ರಲ್ಲಿ ಸಂಭವಿಸಿದ ಭೂಕಂಪನದಲ್ಲಿ 18,500 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.