ADVERTISEMENT

ಟಿಬೆಟಿಯನ್ ಧರ್ಮಗುರು ದಲೈ ಲಾಮಾಗೆ ಮ್ಯಾಗ್ಸೆಸೆ ಪ್ರಶಸ್ತಿ

ಐಎಎನ್ಎಸ್
Published 26 ಏಪ್ರಿಲ್ 2023, 10:40 IST
Last Updated 26 ಏಪ್ರಿಲ್ 2023, 10:40 IST
ದಲೈ ಲಾಮಾ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನದ ಸಂದರ್ಭ (ಚಿತ್ರ ಕೃಪೆ: @HistoryTibetan)
ದಲೈ ಲಾಮಾ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನದ ಸಂದರ್ಭ (ಚಿತ್ರ ಕೃಪೆ: @HistoryTibetan)   

ಧರ್ಮಶಾಲಾ (ಹಿಮಾಚಲ ಪ್ರದೇಶ) : ಏಷ್ಯಾದ ಅತ್ಯುನ್ನತ ಗೌರವ ‘ರೇಮನ್ ಮ್ಯಾಗ್ಸೆಸೆ‘ ಪ್ರಶಸ್ತಿಯನ್ನು ಟಿಬೆಟಿಯನ್ ಧರ್ಮ ಗುರು ದಲೈ ಲಾಮ(87 ವರ್ಷ) ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು.


ಮ್ಯಾಗ್ಸೆಸೆ ಪ್ರತಿಷ್ಠಾನದ ಸದಸ್ಯರು ಇಲ್ಲಿನ ದಲೈ ಲಾಮಾ ಕಚೇರಿಯಲ್ಲಿ ಅವರಿಗೆ ಪ್ರಶಸ್ತಿ ನೀಡಿದರು.


‘ಇದು ದಲೈ ಲಾಮಾರಿಗೆ ಸಂದ ಮೊದಲ ಅಂತರರಾಷ್ಟ್ರೀಯ ಪುರಸ್ಕಾರವಾಗಿದೆ. ಇದು ಟಿಬೆಟ್ ಸಮುದಾಯದ ಬೌದ್ಧ ಧರ್ಮ ರಕ್ಷಣೆ ಹಾಗೂ ನಾಯಕತ್ವವನ್ನು ಗುರುತಿಸಿ ಲಾಮಾ ಅವರಿಗೆ ನೀಡಿದ ಗೌರವವಾಗಿದೆ‘ ಎಂದು ದಲೈ ಲಾಮ ಕಚೇರಿಯ ಮೂಲಗಳು ತಿಳಿಸಿವೆ.

ADVERTISEMENT

1957ರಲ್ಲಿ ನಿಧನರಾದ ಫಿಲಿಫೈನ್ಸ್ ಮಾಜಿ ಅಧ್ಯಕ್ಷ ರೇಮನ್ ಮ್ಯಾಗ್ಸೆಸೆ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ.

2019ರಲ್ಲಿ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪತ್ರಕರ್ತ ರವೀಶ್ ಕುಮಾರ್ ಅವರಿಗೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.