ADVERTISEMENT

ಪ್ರತಿಮೆ ಧ್ವಂಸ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 19:03 IST
Last Updated 11 ಆಗಸ್ಟ್ 2019, 19:03 IST

ಲಾಹೋರ್‌(ಪಿಟಿಐ): ಇಲ್ಲಿನ ಕೋಟೆ ಪ್ರದೇಶದಲ್ಲಿದ್ದ ಮಹಾರಾಜ ರಣಜೀತ್‌ ಸಿಂಗ್‌ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ.

ಒಂಬತ್ತು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಕಳೆದ ಜೂನ್‌ ತಿಂಗಳಲ್ಲಿ ಮಹಾರಾಜ ಅವರ 180ನೇ ಪುಣ್ಯತಿಥಿ ದಿನದಂದು ಅನಾವರಣಗೊಳಿಸಲಾಗಿತ್ತು.

ಸಿಖ್‌ ಸಾಮ್ರಾಜ್ಯದ ಮೊದಲ ಮಹಾರಾಜರಾಗಿದ್ದ ರಣಜೀತ್‌ ಸಿಂಗ್‌ 1839ರಲ್ಲಿ ಮೃತಪಟ್ಟಿದ್ದರು. 19ನೇ ಶತಮಾನದ ಮೊದಲ ಅವಧಿಯಲ್ಲಿ ಪಂಜಾಬ್‌ ಪ್ರದೇಶವನ್ನು ಸುಮಾರು 40 ವರ್ಷಗಳ ಕಾಲ ಆಳಿದ್ದರು.

ADVERTISEMENT

ಪ್ರತಿಮೆ ಧ್ವಂಸ ಮಾಡಿದ ಆರೋಪಕ್ಕಾಗಿ ಪೊಲೀಸರು ಇಬ್ಬರನ್ನು ಬಂಧಿಸಿ, ಧರ್ಮ ನಿಂದನೆ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.