ADVERTISEMENT

ಅಮೆರಿಕ ಇತಿಹಾಸದ ಹೊಸ ಅಧ್ಯಾಯ ಬರೆಯುತ್ತೇವೆ: ಕಮಲಾ ಹ್ಯಾರಿಸ್

ಪಿಟಿಐ
Published 10 ನವೆಂಬರ್ 2020, 11:09 IST
Last Updated 10 ನವೆಂಬರ್ 2020, 11:09 IST
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್   

ವಾಷಿಂಗ್ಟನ್: ‘ದುಡಿಯುವ ವರ್ಗಕ್ಕೆ ಅನುಕೂಲವಾಗುವಂತಹ ಆರ್ಥಿಕ ನೀತಿ ರೂಪಿಸುತ್ತೇವೆ. ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಸೇರಿ ಅಮೆರಿಕದ ಇತಿಹಾಸದ ಮುಂದಿನ ಅಧ್ಯಾಯ ಬರೆಯಲು ಸಜ್ಜಾಗುತ್ತಿದ್ದೇನೆ’ ಎಂದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದರು.

‘ನಾನು ಮತ್ತು ಬೈಡನ್ ಸೇರಿ ದೇಶದ ಇತಿಹಾಸದ ಹೊಸ ಅಧ್ಯಾಯವನ್ನು ಬರೆಯಲಿದ್ದೇವೆ‘ ಎಂದು ಸೋಮವಾರ ‌ಟ್ವೀಟ್ ಮಾಡಿದ್ದಾರೆ.

‘ಅಧಿಕಾರವಹಿಸಿಕೊಂಡ ಮೊದಲ ದಿನ ಕೋವಿಡ್ 19 ಸಾಂಕ್ರಾಮಿಕ ರೋಗ ನಿರ್ವಹಣೆ, ಆರ್ಥಿಕ ಚೇತರಿಕೆ, ಜನಾಂಗೀಯ ಸಮಾನತೆ ಮತ್ತು ಹವಾಮಾನ ಬದಲಾವಣೆ ನಿಭಾಯಿಸುವ ಕುರಿತು ನಾವು ಕೆಲಸ ಮಾಡಲಿದ್ದೇವೆ‘ ಎಂದು ತಾವು ಕೈಗೊಳ್ಳುವ ಆದ್ಯತೆಯ ಕೆಲಸಗಳ ಕುರಿತು ಬೈಡನ್ ತಂಡ ಮ ಜಾಲತಾಣದಲ್ಲಿ ಪ್ರಕಟಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.