ADVERTISEMENT

ಮ್ಯಾನ್ಮಾರ್‌ ವೈಮಾನಿಕ ದಾಳಿ: ಐವರ ಸಾವು

ಏಜೆನ್ಸೀಸ್
Published 14 ಜನವರಿ 2023, 13:54 IST
Last Updated 14 ಜನವರಿ 2023, 13:54 IST
   

ಬ್ಯಾಂಕಾಕ್‌ (ಎಪಿ): ಕರೆನ್ ಜನಾಂಗದವರೇ ಹೆಚ್ಚಿರುವ ಎರಡು ಗ್ರಾಮಗಳ ಮೇಲೆ ಮ್ಯಾನ್ಮಾರ್‌ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ತಾಯಿ ಮತ್ತು 2 ವರ್ಷದ ಮಗು ಸೇರಿ ಐವರು ಮೃತಪಟ್ಟಿದ್ದಾರೆ.

ದಾಳಿಯಲ್ಲಿ ಎರಡು ಚರ್ಚ್‌ಗಳು ನೆಲಸಮವಾಗಿವೆ ಎಂದು ಸಂತ್ರಸ್ತರಿಗೆ ಔಷಧೋಪಚಾರ ಸೇರಿದಂತೆ ವಿವಿಧ ರೀತಿಯ ಪರಿಹಾರವನ್ನು ಒದಗಿಸುವ ‘ಫ್ರೀ ಬರ್ಮಾ ರೇಂಜರ್ಸ್‌’ ಮತ್ತು ಕರೆನ್‌ ಮಹಿಳೆಯರ ಸಂಘಟನೆಗಳು ತಿಳಿಸಿವೆ.

ಹೆಚ್ಚಿನ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ ದಶಕಗಳಿಂದ ಕರೆನ್‌ ಜನಾಂಗವು ಹೋರಾಟ ನಡೆಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.