ADVERTISEMENT

ಸಿಂಗಪುರ ಹೈಕಮಿಷನ್‌ನಿಂದ ಗಣರಾಜ್ಯೋತ್ಸವ: ಭಾರತೀಯ ಕಲಾ ಪ್ರಕಾರಗಳ ಪ್ರದರ್ಶನ

ಪಿಟಿಐ
Published 28 ಜನವರಿ 2026, 15:58 IST
Last Updated 28 ಜನವರಿ 2026, 15:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಿಂಗಪುರ: 77ನೇ ಗಣರಾಜ್ಯೋತ್ಸವ‌ದ ಅಂಗವಾಗಿ ಸಿಂಗಪುರದಲ್ಲಿರುವ ಭಾರತೀಯ ಹೈಕಮಿಷನ್ ರಾಜತಾಂತ್ರಿಕರು, ಗಣ್ಯರು ಮತ್ತು ಇತರ ಪ್ರಮುಖ ಅತಿಥಿಗಳಿಗೆ ಸಮಾರಂಭವೊಂದನ್ನು ಆಯೋಜಿಸಿತ್ತು. ಈ ವೇಳೆ ಭಾರತೀಯ ಕಲಾ ಪ್ರಕಾರಗಳ ಶ್ರೀಮಂತಿಕೆ ಮತ್ತು ವೈವಿಧ್ಯದ ಪ್ರದರ್ಶನವಿತ್ತು.

ಮಂಗಳವಾರ ರಾತ್ರಿ ನಡೆದ ಸಮಾರಂಭದಲ್ಲಿ ಸಿಂಗಪುರದ ಡಿಜಿಟಲ್ ಅಭಿವೃದ್ಧಿ ಮತ್ತು ಮಾಹಿತಿ ಸಚಿವೆ ಜೊಸೆಫಿನ್ ಟಿಯೊ ಗೌರವ ಅತಿಥಿಯಾಗಿ ಸಿಂಗಪುರವನ್ನು ಪ್ರತಿನಿಧಿಸಿದರು. ಈ ವೇಳೆ ವಂದೇ ಮಾತರಂ ಗೀತೆಯ ವಿಷಯದ ಕುರಿತು ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ತಮಿಳುನಾಡು ಮತ್ತು ರಾಜಸ್ಥಾನದ ಸಾಂಪ್ರದಾಯಿಕ ನೃತ್ಯ ಸೇರಿದಂತೆ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳು ಮತ್ತು ಸಂಗೀತ ಪ್ರದರ್ಶನಗಳನ್ನು ಪ್ರಸ್ತುತ ಪಡಿಸಲಾಯಿತು. 

ADVERTISEMENT

‘ಒಂದು ಜಿಲ್ಲೆ, ಒಂದು ಉತ್ಪನ್ನ’ ಉಪಕ್ರಮದಡಿಯಲ್ಲಿ ಗುರುತಿಲಾದ ಕೆಲವು ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಇದು ಭಾರತದ ವಿವಿಧ ಜಿಲ್ಲೆಗಳ ಸ್ಥಳೀಯ ಸಮುದಾಯಗಳು ಮತ್ತು ಕುಶಲಕರ್ಮಿಗಳ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.