ADVERTISEMENT

ಅಟ್ಲಾಂಟಾದಿಂದ ಭಾರತಕ್ಕೆ ವಿಮಾನಯಾನ ಸೇವೆಗೆ ಮನವಿ

ಪಿಟಿಐ
Published 2 ಡಿಸೆಂಬರ್ 2018, 17:32 IST
Last Updated 2 ಡಿಸೆಂಬರ್ 2018, 17:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌:ಅಮೆರಿಕದ ಅಟ್ಲಾಂಟಾದಿಂದ ಭಾರತಕ್ಕೆ ವಾಯಯಾನ ಸೇವೆ ಆರಂಭಿಸುವಂತೆ ಅಮೆರಿಕದಲ್ಲಿರುವ ಭಾರತೀಯರು ಏರ್‌ ಇಂಡಿಯಾಗೆ ಮನವಿ ಮಾಡಿದ್ದಾರೆ.

ಸದ್ಯ, ನ್ಯೂಯಾರ್ಕ್‌, ವಾಷಿಂಗ್ಟನ್‌ ಡಿಸಿ, ಷಿಕಾಗೊ, ಲಾಸ್‌ ಏಂಜಲ್ಸ್‌ ಹಾಗೂ ಸ್ಯಾನ್‌ ಫ್ರಾನ್ಸಿಸ್ಕೊದಿಂದ ಭಾರತಕ್ಕೆ ಏರ್‌ ಇಂಡಿಯಾ ವಿಮಾನಗಳು ಸಂಚರಿಸುತ್ತಿವೆ. ಅಟ್ಲಾಂಟಾದಿಂದಲೂ ಈ ಸೇವೆ ಆರಂಭಿಸಿದರೆ ಅನುಕೂಲವಾಗುತ್ತದೆ ಎಂದು ಅನಿವಾಸಿ ಭಾರತೀಯರು ಕೋರಿದ್ದಾರೆ.

ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್‌ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ.‘ಅಟ್ಲಾಂಟದಿಂದ ಭಾರತಕ್ಕೆ ನೇರ ವಿಮಾನಯಾನ ಸೇವೆ ಆರಂಭಿಸಬೇಕು ಎಂಬ ನಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದುಭಾರತೀಯ ಅಮೆರಿಕನ್‌ ಫೆಡರೇಷನ್‌ನ ಜಾರ್ಜಿಯಾ ಘಟಕದ ಅಧ್ಯಕ್ಷ ಡಾ. ವಾಸುದೇವ ಪಾಟೀಲ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.