ADVERTISEMENT

ನೇಪಾಳ ಅವಳಿ ಬಸ್‌ ದುರಂತ: 7 ಮೃತದೇಹ ಪತ್ತೆ

ಎಪಿ
Published 15 ಜುಲೈ 2024, 14:41 IST
Last Updated 15 ಜುಲೈ 2024, 14:41 IST
ನದಿಯಲ್ಲಿ ಕೊಚ್ಚಿಹೋದ ಬಸ್‌ ಮತ್ತು ಪ್ರಯಾಣಿಕರ ಪತ್ತೆಗಾಗಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು  – ಎಎಫ್‌ಪಿ ಚಿತ್ರ
ನದಿಯಲ್ಲಿ ಕೊಚ್ಚಿಹೋದ ಬಸ್‌ ಮತ್ತು ಪ್ರಯಾಣಿಕರ ಪತ್ತೆಗಾಗಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು  – ಎಎಫ್‌ಪಿ ಚಿತ್ರ   

ಕಠ್ಮಂಡು: ನೇಪಾಳದಲ್ಲಿ ಭೂಕುಸಿತದಿಂದಾಗಿ ಶುಕ್ರವಾರ ಎರಡು ಬಸ್‌ಗಳು ನದಿಗೆ ಬಿದ್ದ ಪರಿಣಾಮ ನೀರಿನಲ್ಲಿ ಕೊಚ್ಚಿಹೋಗಿದ್ದವರಲ್ಲಿ ಏಳು ಜನರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

‘ವಿವಿಧ ಪ್ರದೇಶಗಳಲ್ಲಿ ನದಿ ದಡದಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಕಾಣೆಯಾಗಿರುವ ಬಸ್‌ ಮತ್ತು ಇತರ ಪ್ರಯಾಣಿಕರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

‘ಮೃತದೇಹಗಳ ಗುರುತು ಪತ್ತೆಯಾಗಿದ್ದು, ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ. ಮೃತರಲ್ಲಿ ಮೂವರು ಭಾರತೀಯರಾಗಿದ್ದು, ಉಳಿದ ನಾಲ್ವರು ನೇಪಾಳಿ ಪ್ರಜೆಗಳು’ ಎಂದು ಅಧಿಕಾರಿ ಖೀಮಾ ನಂದ ಭುಸಾಲ್ ಮಾಹಿತಿ ನೀಡಿದ್ದಾರೆ.

ADVERTISEMENT

ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಉತ್ತರ ಭಾಗಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಂಚರಿಸುತ್ತಿದ್ದ ಎರಡು ಬಸ್‌ಗಳು ಶುಕ್ರವಾರ ಮುಂಜಾನೆ ಸಿಮಾಲ್‌ತಾಲ್‌ ಬಳಿ ಸಂಭವಿಸಿದ ಭೂಕುಸಿತದಿಂದಾಗಿ ನದಿಗೆ ಬಿದ್ದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.