ADVERTISEMENT

ಚೀನಾದ ಕೋವಿಡ್ ನಿಯಮಗಳ ವಿರುದ್ಧ ಜನರ ದಂಗೆ: ಏಳು ಮಂದಿ ಬಂಧನ

ಏಜೆನ್ಸೀಸ್
Published 8 ನವೆಂಬರ್ 2022, 13:12 IST
Last Updated 8 ನವೆಂಬರ್ 2022, 13:12 IST
ಕೋವಿಡ್ ಸೋಂಕಿತ ಸಂಖ್ಯೆ ಕ್ಷೀಣಿಸುತ್ತಿದ್ದರೂ, ನಿಯಮ ಸಡಿಲಿಸದೆ ಹಿಂದಿನಂತೇ ಪರೀಕ್ಷೆ ನಡೆಸುತ್ತಿರುವ ಚೀನಾ ಸರ್ಕಾರ (ಎಎಫ್‌ಪಿ ಚಿತ್ರ)
ಕೋವಿಡ್ ಸೋಂಕಿತ ಸಂಖ್ಯೆ ಕ್ಷೀಣಿಸುತ್ತಿದ್ದರೂ, ನಿಯಮ ಸಡಿಲಿಸದೆ ಹಿಂದಿನಂತೇ ಪರೀಕ್ಷೆ ನಡೆಸುತ್ತಿರುವ ಚೀನಾ ಸರ್ಕಾರ (ಎಎಫ್‌ಪಿ ಚಿತ್ರ)   

ಬೀಜಿಂಗ್‌: ಕೋವಿಡ್–19 ನಿಯಮಗಳ ವಿರುದ್ಧ ದಂಗೆ ಎದ್ದು, ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಏಳು ಜನರನ್ನು ಬಂಧಿಸಲಾಗಿದೆ ಎಂದುಈಶಾನ್ಯ ಚೀನಾದ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಚೀನಾದಲ್ಲಿ ಸೋಮವಾರ ಒಂದೇ ದಿನ 5,600 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಆರು ತಿಂಗಳಲ್ಲೇ ಇದು ಗರಿಷ್ಠ ಪ್ರಮಾಣವಾಗಿತ್ತು. ಹೀಗಾಗಿ ರಾಷ್ಟ್ರವ್ಯಾಪಿ ನಿರ್ಬಂಧವನ್ನೂ ಬಿಗಿಗೊಳಿಸಲಾಗಿದೆ. ಆದರೆ ಜನತೆ ಹೊಸದಾಗಿ ವಿಧಿಸಲಾದ ನಿರ್ಬಂಧದಿಂದ ರೋಸಿ ಹೋಗಿ ದಂಗೆ ಏಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮಂಗಳವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕರ ಬಂಧನದ ಕುರಿತು ಮಾಹಿತಿ ಹರಿದಾಡಿತ್ತು, ಆದರೆ ನಂತರ ದೇಶದ ಸೆನ್ಸಾರ್‌ ಅಧಿಕಾರಿಗಳು ಅದನ್ನು ಅಳಿಸಿಹಾಕುವಂತೆ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.