ADVERTISEMENT

ದಕ್ಷಿಣ ಕೊರಿಯಾ:ಹಲವೆಡೆ ಕಾಳ್ಗಿಚ್ಚು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 12:54 IST
Last Updated 25 ಮಾರ್ಚ್ 2025, 12:54 IST
ದಕ್ಷಿಣ ಕೊರಿಯಾದ ಗುಡ್ಡಪ್ರದೇಶಗಳಲ್ಲಿ ಕಾಳ್ಗಿಚ್ಚಿನಿಂದಾಗಿ ಬೆಂಕಿ ಆವರಿಸಿರುವುದು  – ಎಎಫ್‌ಪಿ ಚಿತ್ರ 
ದಕ್ಷಿಣ ಕೊರಿಯಾದ ಗುಡ್ಡಪ್ರದೇಶಗಳಲ್ಲಿ ಕಾಳ್ಗಿಚ್ಚಿನಿಂದಾಗಿ ಬೆಂಕಿ ಆವರಿಸಿರುವುದು  – ಎಎಫ್‌ಪಿ ಚಿತ್ರ    

ಸೋಲ್‌ (ಎಪಿ): ದಕ್ಷಿಣ ಕೊರಿಯಾದ ಹಲವೆಡೆ ಕಾಳ್ಗಿಚ್ಚು ವ್ಯಾಪಕವಾಗಿ ಹಬ್ಬಿರುವ ಕಾರಣ ಅಂಡಾಂಗ್‌ ನಗರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಅಲ್ಲಿನ ಅಧಿಕಾರಿಗಳು ಸೂಚಿಸಿದ್ದಾರೆ.

ಕಾಳ್ಗಿಚ್ಚು ನಂದಿಸಲು ವಾರದಿಂದ ಅಗ್ನಿಶಾಮಕ ಪಡೆಯು ಹರಸಾಹಸಪಡುತ್ತಿದ್ದು, ಮಂಗಳವಾರ ಅಪರಾಹ್ನ ವೇಳೆ 9 ಸ್ಥಳಗಳಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಕಳೆದ 5 ದಿನಗಳಲ್ಲಿ 36,300 ಎಕರೆ ಭೂಮಿಯಲ್ಲಿ ಬೆಂಕಿ ಆವರಿಸಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. 1,300 ವರ್ಷ ಹಳೆಯದಾದ ಬೌದ್ಧ ಮಂದಿರ ಸೇರಿದಂತೆ ಹಲವು ಕಟ್ಟಡಗಳು ಬೆಂಕಿಗಾಹುತಿಯಾಗಿವೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.