ADVERTISEMENT

ರೋಹಿಂಗ್ಯಾ ಹಿಂಸಾಚಾರ: ಪತ್ರಕರ್ತರ ಅರ್ಜಿ ತಿರಸ್ಕರಿಸಿದ ಕೋರ್ಟ್‌

ಏಜೆನ್ಸೀಸ್
Published 11 ಜನವರಿ 2019, 20:00 IST
Last Updated 11 ಜನವರಿ 2019, 20:00 IST

ಯಾಂಗೂನ್‌: ರೋಹಿಂಗ್ಯಾ ಮುಸ್ಲಿಮರ ವಿರುದ್ಧ ದೌರ್ಜನ್ಯ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ರಾಯಿಟರ್ಸ್‌ನ ಇಬ್ಬರು ಪತ್ರಕರ್ತರ ಅರ್ಜಿಯನ್ನು ಯಾಂಗೂನ್‌ನ ಪ್ರಾದೇಶಿಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿ, ಬೇಗ ಬಿಡುಗಡೆಗೊಳಿಸುವಂತೆ ಕೋರಿ ಪತ್ರಕರ್ತರಾದ ವಾ ಲೋನ್‌ (32), ಕ್ಯಾವ್‌ ಸೊ ಊ (28) ಕೋರಿದ್ದರು. ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಧೀಶ ಆಂಗ್‌ ನಾಂಯ್ಗ್‌, ‘ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗಿದೆ. 7 ವರ್ಷ ಜೈಲು ಶಿಕ್ಷೆ ವಿಧಿಸಿರುವುದು ಸೂಕ್ತ ನಿರ್ಧಾರವಾಗಿದೆ’ ಎಂದು ಹೇಳಿದರು.

ರಾಜ್ಯ ರಹಸ್ಯ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ 2017ರ ಡಿಸೆಂಬರ್‌ನಲ್ಲಿ ಈ ಇಬ್ಬರನ್ನು ಬಂಧಿಸಲಾಗಿತ್ತು. ಈಗಾಗಲೇ 13 ತಿಂಗಳು ಜೈಲು ಶಿಕ್ಷೆಯನ್ನು ಈ ಇಬ್ಬರು ಅನುಭವಿಸಿದ್ದಾರೆ.

ADVERTISEMENT

10 ರೋಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡದ ಕುರಿತು ತನಿಖೆ ನಡೆಯುತ್ತಿದ್ದ ವೇಳೆ ಈ ಇಬ್ಬರನ್ನು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ಈ ಇಬ್ಬರು ಪತ್ರಕರ್ತರನ್ನು ಟೈಮ್‌ ಮ್ಯಾಗಜಿನ್‌ ‘ವರ್ಷದ ವ್ಯಕ್ತಿ–2018’ ಎಂದು ಪ್ರಶಸ್ತಿ ನೀಡಿ ಗೌರವಿಸಿತ್ತು.ಮಾಧ್ಯಮ ಸ್ವಾತಂತ್ರ್ಯದ ನಾಯಕರು ಎಂದೇ ಈ ಇಬ್ಬರನ್ನು ಬಿಂಬಿಸಲಾಗಿತ್ತು.

ನ್ಯಾಯಾಲಯ ಅರ್ಜಿ ತಿರಸ್ಕರಿಸುತ್ತಿದ್ದಂತೆ, ಪತ್ರಕರ್ತರ ಕುಟುಂಬ ಸದಸ್ಯರು ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.