ಸ್ಟಾಕ್‌ಹೋಮ್: ಸ್ವೀಡನ್ ದೇಶದಲ್ಲಿ ಹಿಂಸಾಚಾರ ಸಂಭವಿಸಿದ್ದು ಪೊಲೀಸರು ಸೇರಿದಂತೆ ನೂರಾರು ಜನರು ಗಾಯಗೊಂಡಿರುವುದಾಗಿ ತಡವಾಗಿ ವರದಿಯಾಗಿದೆ.
ಮುಸ್ಲಿಂ ವಿರೋಧಿ ಗುಂಪೊಂದು ಕುರಾನ್ ಗ್ರಂಥವನ್ನು ಸುಟ್ಟುಹಾಕಿರುವ ಘಟನೆ ನಡೆದಿದ್ದು. ಇದನ್ನು ವಿರೋಧಿಸಿ ಮತ್ತೊಂದು ಗುಂಪು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಿದೆ.
ಘಟನೆಯಲ್ಲಿ 70ಕ್ಕೂ ಹೆಚ್ಚು ಸ್ವೀಡನ್ ಪೊಲೀಸರು ಹಾಗೂ ನೂರಾರು ಪ್ರತಿಭಟನಕಾರರು ಗಾಯಗೊಂಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಸ್ವೀಡನ್ ಸರ್ಕಾರ ತಿಳಿಸಿದೆ.
ಸ್ವೀಡನ್ ದೇಶದ ಗಡಿ ಭಾಗ ಮಲ್ಮೊದಲ್ಲಿ ಈ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.