ಡ್ರೋನ್
-ರಾಯಿಟರ್ಸ್ ಚಿತ್ರ
ಮಾಸ್ಕೊ: ಗಡಿ ಭಾಗದ ಕ್ರಿಮಿಯಾ ಹಾಗೂ ಇತರೆ ವಲಯವನ್ನು ಗುರಿಯಾಗಿಸಿ ಉಕ್ರೇನ್ ಪ್ರಯೋಗಿಸಿದ್ದ 170 ಡ್ರೋನ್ ಹಾಗೂ 10 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ಸೇನೆ ಶನಿವಾರ ಹೇಳಿದೆ.
ಗಡಿಗೆ ಹೊಂದಿಕೊಂಡಿರುವ ಕ್ರಿಮಿಯಾ ವಲಯದಲ್ಲಿ 96, ರಸ್‌ನೊಡಾರ್ ವ್ಯಾಪ್ತಿಯಲ್ಲಿ 47, ರೊಸ್ತೊವ್ ವ್ಯಾಪ್ತಿಯಲ್ಲಿ 9, ಬಯಾಂಸ್ಕ್, ಕುರ್ಸ್ಕ್ ವಲಯದಲ್ಲಿ 8 ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದೆ.
ಅಲ್ಲದೆ, ಕಪ್ಪು ಸಮುದ್ರ ವ್ಯಾಪ್ತಿಯಲ್ಲಿ ಉಕ್ರೇನ್‌ನ ನೌಕಾಪಡೆ ಪ್ರಯೋಗಿಸಿದ್ದ 14 ಡ್ರೋನ್‌ಗಳನ್ನು ನಾಶಪಡಿಸಲಾಯಿತು ಎಂದು ಸೇನೆಯು ತಿಳಿಸಿದೆ.
ರಸೋಂಡಾರ್‌ನ ಗವರ್ನರ್ ವೆನಿಯಾಮಿನ್ ಒಂಡ್ರಾಟೆವ್ ಅವರು, ಡ್ರೋನ್ ದಾಳಿಯಿಂದ ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಪೆಟ್ಟಾಗಿದೆ. ಮೂರು ವಸತಿ ಸಂಕೀರ್ಣಗಳು ಜಖಂಗೊಂಡಿವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.