ADVERTISEMENT

ಕೋವಿಡ್‌-19 | ರಷ್ಯಾದಲ್ಲಿ ಒಂದೇ ದಿನ 200 ಮಂದಿ ಸಾವು

ಏಜೆನ್ಸೀಸ್
Published 6 ಜೂನ್ 2020, 20:53 IST
Last Updated 6 ಜೂನ್ 2020, 20:53 IST
   

ಮಾಸ್ಕ: ರಷ್ಯಾದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳ ಸಂಖ್ಯೆ ಸ್ಥಿರವಾಗಿದ್ದರೂ, ಶನಿವಾರ ಒಂದೇ ದಿನ ಕೋವಿಡ್‌–19ಗೆ 200 ಮಂದಿ ಬಲಿಯಾಗಿದ್ದಾರೆ.

ರಷ್ಯಾದಲ್ಲಿ ಮೇ.29 ರಂದು ಅತಿ ಹೆಚ್ಚು ಮಂದಿ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದರು. ಇದಾದ ಬಳಿಕ ಶನಿವಾರ 200 ಮಂದಿ ಮೃತಪಟ್ಟಿದ್ದು, ಎರಡನೇ ಅತಿ ಹೆಚ್ಚು ಸಾವಿನ ಸಂಖ್ಯೆ ದಾಖಲಾಗಿದೆ.

ರಷ್ಯಾದಲ್ಲಿ8,855 ಹೊಸ ಪ್ರಕರಣಗಳು ಸೇರಿದಂತೆ 4.58 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ 5,725 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.