ADVERTISEMENT

ಉಕ್ರೇನ್‌ ಮೇಲೆ ರಷ್ಯಾ ವಾಯು, ಗುಂಡಿನ ದಾಳಿ

ಡೊನ್‌ಬಾಸ್‌ ಮತ್ತು ಮೈಕೊಲೈವ್‌ ಪ್ರದೇಶದಲ್ಲಿ ಆಕ್ರಮಣ

​ಪ್ರಜಾವಾಣಿ ವಾರ್ತೆ
Published 22 ಮೇ 2022, 12:44 IST
Last Updated 22 ಮೇ 2022, 12:44 IST
ಪ್ರಾತಿನಿಧಿಕ ಚಿತ್ರ –ಎಎಫ್‌ಪಿ
ಪ್ರಾತಿನಿಧಿಕ ಚಿತ್ರ –ಎಎಫ್‌ಪಿ   

ಲಂಡನ್‌ (ರಾಯ್‌ಟರ್ಸ್‌): ಉಕ್ರೇನ್‌ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಕಮಾಂಡ್‌ ಕೇಂದ್ರಗಳು, ಸೈನಿಕರು ಮತ್ತು ಶಸ್ತ್ರ ಸಂಗ್ರಹಗಾರಗಳನ್ನು ಗುರಿಯಾಗಿಸಿಕೊಂಡು ವಾಯು ಮತ್ತು ಗುಂಡಿನ ದಾಳಿ ನಡೆಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರಷ್ಯಾ ರಕ್ಷಣಾ ಇಲಾಖೆ ವಕ್ತಾರ,ಮೇಜರ್‌ ಜನರಲ್‌ ಇಗೋರ್‌ ಕೊನಶೆನ್‌ಕೊವ್, ‘ಕ್ಷಿಪಣಿ ದಾಳಿ ಮೂಲಕ 3 ಕಮಾಂಡ್‌ ಕೇಂದ್ರಗಳು, ಡೊನ್‌ಬಾಸ್‌ ಪ್ರದೇಶದ 4 ಶಸ್ತ್ರ ಸಂಗ್ರಹಗಾರಗಳು ಸೇರಿದಂತೆ ಸೈನಿಕರು ಮತ್ತು ಶಸ್ತ್ರಾಸ್ತ್ರ ಕೊಠಡಿಗಳಿರುವ 13 ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ’ ಎಂದು ತಿಳಿಸಿದ್ದಾರೆ.

ಹಾಗೆಯೇ, ಉಕ್ರೇನ್‌ನ ಮೈಕೊಲೈವ್‌ ಪ್ರದೇಶದಲ್ಲಿ ನಡೆಸಿದ ರಾಕೆಟ್‌ ದಾಳಿಯಲ್ಲಿ ಮೊಬೈಲ್‌ ಡ್ರೋನ್‌ ವಿರೋಧಿ ವ್ಯವಸ್ಥೆಯನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಇದೇ ವೇಳೆ, ರಷ್ಯಾ ಯುದ್ಧ ಸಾರಿದಾಗಿನಿಂದ ಉಕ್ರೇನ್‌ನ 174 ವಿಮಾನಗಳು, 125 ಹೆಲಿಕಾಪ್ಟರ್‌ಗಳು, 977 ಮಾನವರಹಿತ ವೈಮಾನಿಕ ವಾಹನಗಳು, 317 ವಿಮಾನ ವಿರೋಧಿ ಕ್ಷಿಪಣಿ ವ್ಯವಸ್ಥೆ ಹಾಗೂ 3,198 ಟ್ಯಾಂಕ್‌ಗಳು, 408 ರಾಕೆಟ್‌ ಲಾಂಚರ್‌ಗಳನ್ನು ನಾಶ ಮಾಡಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.