ADVERTISEMENT

‘ಆತುರದ ವಾಪಸಾತಿ‘ ಅಫ್ಗಾನಿಸ್ತಾನಕ್ಕೆ ಅಪಾಯ ತಂದೊಡ್ಡಿದೆ: ರಷ್ಯಾ

ಏಜೆನ್ಸೀಸ್
Published 16 ಜುಲೈ 2021, 16:04 IST
Last Updated 16 ಜುಲೈ 2021, 16:04 IST
ಸೆರ್ಗೆ ಲಾವ್‌ರೊವ್
ಸೆರ್ಗೆ ಲಾವ್‌ರೊವ್   

ಮಾಸ್ಕೊ: ಅಮೆರಿಕ ಮತ್ತು ನ್ಯಾಟೊ ಪಡೆಗಳು ತಮ್ಮ ಸೈನ್ಯವನ್ನು ಆತುರವಾಗಿ ಹಿಂತೆಗೆದುಕೊಂಡಿರುವುದು ಅಫ್ಗಾನಿಸ್ತಾನದಲ್ಲಿ ಭದ್ರತೆಗೆ ಧಕ್ಕೆಯುಂಟಾಗಲು ಕಾರಣವಾಗಿದೆ ಎಂದು ರಷ್ಯಾ ಶುಕ್ರವಾರ ಆರೋಪಿಸಿದೆ.

ಭದ್ರತೆಯು ಕ್ಷೀಣಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ನೆರೆಯ ರಾಷ್ಟ್ರಗಳಲ್ಲೂ ಇಂಥ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆಯೆಂದೂ ರಷ್ಯಾ ಎಚ್ಚರಿಸಿದೆ.

‘ದುರುದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ನಾವು ಅಫ್ಗಾನಿಸ್ತಾನದ ದುಃಸ್ಥಿತಿಯನ್ನು ನೋಡಬೇಕಾಗಿದೆ’ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್‌ರೊವ್ ಅವರು ಸುದ್ದಿಸಂಸ್ಥೆಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಅಮೆರಿಕ ಮತ್ತು ನ್ಯಾಟೊ ಪಡೆಗಳು ತಮ್ಮ ಸೈನ್ಯವನ್ನು ಹಿಂತೆಗೆದುಕೊಂಡ ಬೆನ್ನಲ್ಲೇ ತಾಲಿಬಾನಿಗಳು ಅಫ್ಗಾನಿಸ್ತಾನದ ಗಡಿಭಾಗಗಳು ಸೇರಿದಂತೆ ಹಲವು ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.