
ರಷ್ಯಾ ದಾಳಿಯಿಂದ ಹಾನಿಗೊಂಡಿರುವ ಸ್ಥಳದಲ್ಲಿ ಉಕ್ರೇನ್ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಹಾರ್ಕಿವ್ (ಉಕ್ರೇನ್): ಉಕ್ರೇನ್ ಮೇಲೆ 20ಕ್ಕೂ ಅಧಿಕ ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳ ಮೂಲಕ ರಷ್ಯಾ ಮಂಗಳವಾರ ದಾಳಿ ನಡೆಸಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ದಾಳಿಯಲ್ಲಿ ಉಕ್ರೇನ್‌ನ ವಿದ್ಯುತ್ ಸ್ಥಾವರವೊಂದು ಧ್ವಂಸವಾಗಿದ್ದು, ಈಗಾಗಲೇ ತೀವ್ರವಾಗಿ ಹದಗೆಟ್ಟಿರುವ ಇಂಧನ ವ್ಯವಸ್ಥೆಯು ಮತ್ತಷ್ಟು ಸಮಸ್ಯೆಗೆ ಸಿಲುಕಿದೆ.
‘ರಷ್ಯಾದ 25 ಕ್ಷಿಪಣಿಗಳು ಮತ್ತು 293 ಡ್ರೋನ್‌ಗಳು ದಾಳಿ ನಡೆಸಿವೆ’ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ. ಹಾರ್ಕಿವ್‌ನಲ್ಲಿ 4 ಮಂದಿ ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಗವರ್ನರ್ ತಿಳಿಸಿದ್ದಾರೆ.
ವಸತಿ ಕಟ್ಟಡಗಳು, ಆಸ್ಪತ್ರೆ ಮತ್ತು ಕಿಂಡರ್‌ಗಾರ್ಡನ್‌ಗೆ ಹಾನಿಯಾಗಿದೆ. ಐದು ಮಂದಿ ಗಾಯಗೊಂಡಿದ್ದಾರೆ ಎಂದು ಒಡೆಸಾ ನಗರದ ಗವರ್ನರ್ ತಿಳಿಸಿದ್ದಾರೆ.
ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾ ರಕ್ಷಣಾ ಸಚಿವಾಲಯ, ‘ಉಕ್ರೇನ್ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ’ ಎಂದು ತಿಳಿಸಿದೆ.