ADVERTISEMENT

ರಷ್ಯಾ–ಉಕ್ರೇನ್‌: 303 ಕೈದಿಗಳ ವಿನಿಮಯ

ಒಟ್ಟು 2000 ಕೈದಿಗಳನ್ನು ಬಿಡುಗಡೆಗೊಳಿಸಿದ ಉಭಯ ದೇಶಗಳು

ಎಪಿ
Published 25 ಮೇ 2025, 14:31 IST
Last Updated 25 ಮೇ 2025, 14:31 IST
<div class="paragraphs"><p>ರಷ್ಯಾದ ವೈಮಾನಿಕ ದಾಳಿಯಿಂದಾಗಿ ಉಕ್ರೇನ್‌ನ ಕೀವ್‌ ಪ್ರದೇಶದಲ್ಲಿ ಹಲವು ಮನೆಗಳು ಸುಟ್ಟುಕರಕಲಾಗಿವೆ </p></div>

ರಷ್ಯಾದ ವೈಮಾನಿಕ ದಾಳಿಯಿಂದಾಗಿ ಉಕ್ರೇನ್‌ನ ಕೀವ್‌ ಪ್ರದೇಶದಲ್ಲಿ ಹಲವು ಮನೆಗಳು ಸುಟ್ಟುಕರಕಲಾಗಿವೆ

   

ಕೀವ್‌: ಉಕ್ರೇನ್‌ ಮೇಲೆ ರಷ್ಯಾ ಭಾನುವಾರ ಭೀಕರ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಉಭಯ ದೇಶಗಳು ನೂರಾರು ಕೈದಿಗಳನ್ನು ವಿನಿಮಯ ಮಾಡಿಕೊಂಡಿವೆ.

ಭಾನುವಾರ 303, ಶನಿವಾರ 307 ಮತ್ತು ಶುಕ್ರವಾರ 390 ಮಂದಿಯನ್ನು ಎರಡು ದೇಶಗಳು ಬಿಡುಗಡೆಗೊಳಿಸಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ADVERTISEMENT

ಮೇ 16ರಂದು ಇಸ್ತಾನ್‌ಬುಲ್‌ನಲ್ಲಿ ನಡೆದ ಮಾತುಕತೆಯಲ್ಲಿ, 2000 ಕೈದಿಗಳ ಕೊನೆಯ ಹಂತ‌ದ ವಿನಿಮಯಕ್ಕೆ ನಿರ್ಧರಿಸಲಾಗಿತ್ತು ಎಂದು ರಷ್ಯಾ ತಿಳಿಸಿದೆ.

ಕೈದಿಗಳ ವಿನಿಮಯ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ರಷ್ಯಾದಿಂದ ಬೃಹತ್‌ ದಾಳಿ: 12 ಸಾವು

ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನಲ್ಲಿ 12 ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ. ರಷ್ಯಾವು 367 ಡ್ರೋನ್‌ ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡಿದ್ದು ಮೂರು ವರ್ಷಗಳಲ್ಲಿ ನಡೆದ ಅತಿ ದೊಡ್ಡ ವೈಮಾನಿಕ ದಾಳಿ ಇದಾಗಿದೆ ಎಂದು ಉಕ್ರೇನ್‌ ವಾಯುಪಡೆಯ ವಕ್ತಾರರು ತಿಳಿಸಿದ್ದಾರೆ.

ಉಕ್ರೇನ್‌ನ ಮೂವತ್ತಕ್ಕೂ ಹೆಚ್ಚು ನಗರ ಮತ್ತು ಗ್ರಾಮಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ. ರಷ್ಯಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ‘ಉಕ್ರೇನ್‌ನ 110 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ’ ಎಂದು ತಿಳಿಸಿದೆ. ರಷ್ಯಾದ 45 ಕ್ಷಿಪಣಿ ಮತ್ತು 266 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.