ADVERTISEMENT

ತಮ್ಮ ಭೂಪ್ರದೇಶದ ಮೇಲೆ ಪತ್ತೆದಾರಿ ವಿಮಾನ ಹಾರಾಟ: ಬ್ರಿಟನ್‌ಗೆ ರಷ್ಯಾ ಎಚ್ಚರಿಕೆ

ಏಜೆನ್ಸೀಸ್
Published 16 ಆಗಸ್ಟ್ 2022, 16:48 IST
Last Updated 16 ಆಗಸ್ಟ್ 2022, 16:48 IST
ರಷ್ಯಾ ಸೇನೆ
ರಷ್ಯಾ ಸೇನೆ   

ಮಾಸ್ಕೊ: ತಮ್ಮ ಭೂಪ್ರದೇಶದ ಮೇಲೆ ಯೋಜಿತ ಪತ್ತೆದಾರಿ ವಿಮಾನ ಹಾರಾಟದ ವಿರುದ್ಧ ರಷ್ಯಾದ ರಕ್ಷಣಾ ಸಚಿವಾಲಯ ಮಂಗಳವಾರ ಬ್ರಿಟನ್‌ಗೆ ಎಚ್ಚರಿಕೆ ನೀಡಿದ್ದು, ತಮ್ಮ ಪ್ರದೇಶದ ಒಳನುಗ್ಗುವಿಕೆಯನ್ನು ತಡೆಯಲು ದೇಶದ ವಾಯುಪಡೆಗೆ ಆದೇಶ ನೀಡಲಾಗಿದೆ ಎಂದು ಖಡಕ್ ಪ್ರತಿಕ್ರಿಯೆ ಹೇಳಿದೆ.

ಉಕ್ರೇನ್‌ ಮೇಲೆ ಆಕ್ರಮಣ ನಡೆಸಿರುವ ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಉದ್ವಿಗ್ನತೆಯ ಮಧ್ಯೆ ಮಾಸ್ಕೊದಿಂದ ಈ ಕಠಿಣ ಹೇಳಿಕೆ ಬಿಡುಗಡೆಯಾಗಿದೆ.

ರಷ್ಯಾದ ಭೂಪ್ರದೇಶದ ಮೇಲೆ ಭಾಗಶಃ ಹಾದುಹೋಗಿರುವ ಆರ್‌ಸಿ-135 ವಿಚಕ್ಷಣ ವಿಮಾನದ ಯೋಜಿತ ಹಾರಾಟದ ಬಗ್ಗೆ ಬ್ರಿಟನ್‌ಗೆ ರಷ್ಯಾ ಎಚ್ಚರಿಕೆ ಸಂದೇಶವನ್ನು ಕಳುಹಿಸಿದೆ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

‘ನಾವು ಈ ಕ್ರಮವನ್ನು ಉದ್ದೇಶಪೂರ್ವಕ ಪ್ರಚೋದನೆ ಎಂದು ಪರಿಗಣಿಸುತ್ತೇವೆ’ಎಂದು ಸಚಿವಾಲಯ ಹೇಳಿದೆ.

‘ಗಡಿಯ ಉಲ್ಲಂಘನೆಯನ್ನು ತಡೆಯುವ ಕೆಲಸವನ್ನು ರಷ್ಯಾದ ವಾಯುಪಡೆಗೆ ನೀಡಲಾಗಿದೆ’ ಎಂದು ಅದು ಹೇಳಿದೆ.

‘ಈ ಉದ್ದೇಶಪೂರ್ವಕ ಪ್ರಚೋದನೆಯ ಎಲ್ಲಾ ಸಂಭವನೀಯ ಪರಿಣಾಮಗಳು ಸಂಪೂರ್ಣವಾಗಿ ಬ್ರಿಟಿಷರ ಕಡೆ ಇರುತ್ತದೆ‘ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ,

ಸೋಮವಾರ, ಬ್ಯಾರೆಂಟ್ಸ್ ಮತ್ತು ವೈಟ್ ಸೀಸ್ ನಡುವಿನ ಸ್ವ್ಯಾಟೊಯ್ ನೋಸ್ ಕೇಪ್ ಬಳಿಯ ರಷ್ಯಾದ ಗಡಿಯನ್ನು ದಾಟಿದ ಬ್ರಿಟಿಷ್ ಆರ್‌ಸಿ -135 ವಿಚಕ್ಷಣ ವಿಮಾನವನ್ನು ಪ್ರತಿಬಂಧಿಸಲು ರಷ್ಯಾದ ಫೈಟರ್ ಜೆಟ್ ಮಿಗ್–31 ಅನ್ನು ನಿಯೋಜಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.