ಡ್ರೋನ್ ದಾಳಿಯಿಂದ ಹಾನಿಗೊಳಗಾದ ಕಟ್ಟಡ
ಕೀವ್: ದಕ್ಷಿಣ ಉಕ್ರೇನ್‌ನ ಬಂದರು ನಗರಿ ಒಡೆಸಾದಲ್ಲಿರುವ ವಸತಿ ಸಮುಚ್ಚಯದ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಒಲೇಹ್ ಕಿಪರ್ ಶನಿವಾರ ತಿಳಿಸಿದ್ದಾರೆ.
‘ಎಂಟು ಡ್ರೋನ್‌ಗಳ ಮೂಲಕ ಒಡೆಸಾ ನಗರದ ಮೇಲೆ ದಾಳಿ ನಡೆಸಲಾಗಿತ್ತು. ಈ ಪೈಕಿ ಏಳು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ’ ಎಂದು ಉಕ್ರೇನ್ ಸೇನಾ ಪಡೆ ತಿಳಿಸಿದೆ. ದೇಶದಾದ್ಯಂತ ದಾಳಿ ನಡೆಸುತ್ತಿದ್ದ 14 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದೂ ಅದು ಹೇಳಿದೆ.
ಡ್ರೋನ್ ದಾಳಿಯಿಂದಾಗಿ ಪ್ರದೇಶದ ಎತ್ತಡದ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಹಾರ್ಕೀವ್ ಪ್ರಾದೇಶಿಕ ಗರ್ವನರ್ ತಿಳಿಸಿದ್ದಾರೆ.
ಡ್ರೋನ್ ದಾಳಿ ಬಗ್ಗೆ ರಷ್ಯಾ ಸೇನೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.