ADVERTISEMENT

ಉಕ್ರೇನ್‌: ಕ್ಷಿಪಣಿ ದಾಳಿಗೆ ಐವರ ಸಾವು

ರಾಯಿಟರ್ಸ್
Published 30 ಏಪ್ರಿಲ್ 2024, 12:35 IST
Last Updated 30 ಏಪ್ರಿಲ್ 2024, 12:35 IST
ಉಕ್ರೇನ್‌ನ ಬಂದರು ನಗರಿ ಒಡೆಸಾದ ಕಡಲ ತೀರದಲ್ಲಿರುವ ಪ್ರಮುಖ ಶಿಕ್ಷಣ ಸಂಸ್ಥೆಯೊಂದರ ಮೇಲೆ ರಷ್ಯಾ ಸೋಮವಾರ ಕ್ಷಿಪಣಿ ದಾಳಿ ನಡೆಸಿದೆ
ಎಎಫ್‌ಪಿ ಚಿತ್ರ
ಉಕ್ರೇನ್‌ನ ಬಂದರು ನಗರಿ ಒಡೆಸಾದ ಕಡಲ ತೀರದಲ್ಲಿರುವ ಪ್ರಮುಖ ಶಿಕ್ಷಣ ಸಂಸ್ಥೆಯೊಂದರ ಮೇಲೆ ರಷ್ಯಾ ಸೋಮವಾರ ಕ್ಷಿಪಣಿ ದಾಳಿ ನಡೆಸಿದೆ ಎಎಫ್‌ಪಿ ಚಿತ್ರ   

ಒಡೆಸಾ: ಉಕ್ರೇನ್‌ನ ಬಂದರು ನಗರಿ ಒಡೆಸಾದ ಕಡಲ ತೀರದಲ್ಲಿರುವ ಪ್ರಮುಖ ಶಿಕ್ಷಣ ಸಂಸ್ಥೆಯೊಂದರ ಮೇಲೆ ರಷ್ಯಾವು ಸೋಮವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಐವರು ಮೃತಪಟ್ಟಿದ್ದು, 32 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದ ಕ್ಷಿಪಣಿ ದಾಳಿಗೆ ಮೃತಪಟ್ಟವರಲ್ಲಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ವ್ಯಕ್ತಿಯೂ ಸೇರಿದ್ದಾರೆ ಎಂದು ಪ್ರಾದೇಶಿಕ ಗವರ್ನರ್‌ ಒಲೇಹ್‌ ಕಿಪರ್‌ ಮಾಹಿತಿ ನೀಡಿದ್ದಾರೆ.

ಗಾಯಗೊಂಡವರಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಎಂಟು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಮಗು ಹಾಗೂ ಗರ್ಭಿಣಿಯೊಬ್ಬರು ಗಾಯಗೊಂಡಿದ್ದಾರೆ ಎಂದಿದ್ದಾರೆ.

ADVERTISEMENT

ಗಾಯಾಳುಗಳಲ್ಲಿ ಸಂಸತ್‌ನ ಮಾಜಿ ಸದಸ್ಯ ಸೆರ್ಹಿ ಕಿವಲೋವ್‌ ಕೂಡ ಸೇರಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.