ಲುವಿವ್, ಉಕ್ರೇನ್:ರಷ್ಯಾ ಪಡೆಗಳು ಶನಿವಾರ ನಡೆಸಿದ ರಾಕೆಟ್ ದಾಳಿಯಲ್ಲಿ ಕೀವ್ ಸಮೀಪದ ವಸಿಕೀವ್ ಪಟ್ಟಣದಲ್ಲಿರುವ ವಾಯುನೆಲೆ ನಾಶವಾಗಿದೆ.
ವಸಿಕೀವ್ ಮೇಯರ್ ನಟಾಲಿಯಾ ಬಾಲಾಸಿನೊವಿಚ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ‘ಇಂಟರ್‌ಫ್ಯಾಕ್ಸ್ ಉಕ್ರೇನ್’ ಸುದ್ದಿಸಂಸ್ಥೆ ವರದಿ ಮಾಡಿದೆ.
‘ರಷ್ಯಾ ಪಡೆಗಳ ರಾಕೆಟ್ ದಾಳಿಯಿಂದ ಶಸ್ತ್ರಾಸ್ತ್ರ ಕೋಠಿಗೂ ಅಪಾರ ಹಾನಿಯುಂಟಾಗಿದೆ ಎಂಬುದಾಗಿ ನಟಾಲಿಯಾ ತಿಳಿಸಿದ್ದಾರೆ’ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.