ADVERTISEMENT

ಉಕ್ರೇನ್‌ ಮೇಲೆ ಕ್ಷಿಪಣಿ ದಾಳಿ: ಮಗು ಸೇರಿ ಏಳು ಜನ ಸಾವು

ರಾಯಿಟರ್ಸ್
Published 13 ಆಗಸ್ಟ್ 2023, 13:31 IST
Last Updated 13 ಆಗಸ್ಟ್ 2023, 13:31 IST
   

ಕೀವ್‌: ‘ಹೆರ್ಸಾನ್‌ ಪ್ರಾಂತ್ಯದ ಎರಡು ಹಳ್ಳಿಗಳ ಮೇಲೆ ರಷ್ಯಾ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದು, ಮಗು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ’ ಎಂದು ಉಕ್ರೇನ್‌ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.

‘ದಾಳಿಯಿಂದಾಗಿ ಶೈರೊಕಾ ಬಲ್ಕಾ ಎಂಬ ಹಳ್ಳಿಯಲ್ಲಿ ದಂಪತಿ, 23 ದಿನದ ಮಗು ಮತ್ತು 12 ವರ್ಷದ ಮಗ ಹಾಗೂ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ’ ಎಂದು ಆಂತರಿಕ ಸಚಿವ ಇಹೋರ್ ಕ್ಲೈಮೆಂಕೊ ಅವರು ಹೇಳಿದ್ದಾರೆ.

‘ಸ್ಟಾನಿಸ್ಲಾವ್‌ ಎಂಬ ಪಕ್ಕದ ಹಳ್ಳಿಯ ಮೇಲೂ ನಡೆದ ದಾಳಿಯಲ್ಲಿ ಇಬ್ಬರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ. ಈ ಹಳ್ಳಿಯ ಮೇಲೆ 12 ಬಾರಿ ಕ್ಷಿಪಣಿ ದಾಳಿ ನಡೆಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

‘ಭಯೋತ್ಪಾದಕರು ಸಾರ್ವಜನಿಕರನ್ನು ಸಾಯಿಸುವುದನ್ನು ನಿಲ್ಲಿಸುವುದಿಲ್ಲ’ ಎಂದು ಕ್ಲೈಮೆಂಕೊ ಅವರು ತಮ್ಮ ಟೆಲಿಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, ಹಾನಿಗೀಡಾಗಿರುವ ಮನೆಗಳ  ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.