ADVERTISEMENT

ಮಂಗಳನ ಅಂಗಳದಲ್ಲಿ ಲವಣಯುಕ್ತ ನೀರು!

ಪಿಟಿಐ
Published 13 ಫೆಬ್ರುವರಿ 2020, 19:23 IST
Last Updated 13 ಫೆಬ್ರುವರಿ 2020, 19:23 IST
s
s   

ವಾಷಿಂಗ್ಟನ್‌: ಮಂಗಳನ ಅಂಗಳದಲ್ಲಿ ಪ್ರತಿ ವರ್ಷ ಕೆಲ ದಿನಗಳ ಕಾಲ ಲವಣಯುಕ್ತ ನೀರು ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ಅಮೆರಿಕದ ಪ್ಲಾನೆಟರಿ ವಿಜ್ಞಾನ ಸಂಸ್ಥೆಯ ಸಂಶೋಧಕರು ಈ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ.

ಮಂಗಳನ ಅಂಗಳದಲ್ಲಿ ಮಂಜುಗಡ್ಡೆ ಇರುವ ಪ್ರದೇಶಗಳಿವೆ. ಈ ಮಂಜುಗಡ್ಡೆಗಳು ಕರಗಿದಾಗ ಅಥವಾ ಆವಿಯಾದಾಗ ಲವಣಯುಕ್ತ ನೀರಾಗಿ ಪರಿವರ್ತನೆಯಾಗುತ್ತದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ADVERTISEMENT

‘ಮಂಜುಗಡ್ಡೆಯು ತನ್ನ ಕುದಿಯುವ ಬಿಂದುಗೆ ತಲುಪುವ ಮುನ್ನವೇ ವಾತಾವರಣದಲ್ಲಿ ತೀವ್ರ ಗತಿಯಲ್ಲಿ ಕರಗುತ್ತದೆ. ಆದರೆ, ದ್ರವರೂಪದ ನೀರು ರಚನೆಯಾಗುವ ಸ್ಥಳಗಳನ್ನು ಪತ್ತೆ ಮಾಡುವುದು ಕಷ್ಟ ಸಾಧ್ಯ’ ಎಂದು ಸಂಸ್ಥೆಯ ಹಿರಿಯ ವಿಜ್ಞಾನಿ ನೊರ್ಬರ್ಟ್‌ ಷೊರ್ಘೋಫರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.