ADVERTISEMENT

ಹಣ ದುರ್ಬಳಕೆ: ನೆತನ್ಯಾಹು ಪತ್ನಿಗೆ ದಂಡ

ಏಜೆನ್ಸೀಸ್
Published 16 ಜೂನ್ 2019, 16:25 IST
Last Updated 16 ಜೂನ್ 2019, 16:25 IST
ಸಾರಾ ನೆತನ್ಯಾಹು
ಸಾರಾ ನೆತನ್ಯಾಹು   

ಜೆರುಸಲೇಂ: ಊಟದ ವೆಚ್ಚಕ್ಕಾಗಿ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡ ಕಾರಣ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಪತ್ನಿಗೆ ಇಲ್ಲಿನ ನ್ಯಾಯಾಲಯ ದಂಡ ವಿಧಿಸಿದೆ.

ಸಾರಾ ನೆತನ್ಯಾಹು ಅವರು 10 ಸಾವಿರ ಶೆಕೆಲ್ಸ್‌ (₹1.93 ಲಕ್ಷ) ದಂಡ ಪಾವತಿಸಬೇಕು. ಸರ್ಕಾರಕ್ಕೆ 45 ಸಾವಿರ ಶೆಕೆಲ್ಸ್‌ ಅನ್ನು (₹ 8.72) ಒಂಬತ್ತುಕಂತುಗಳಲ್ಲಿ ಮರುಪಾವತಿಸಬೇಕು ಎಂದು ಜೆರುಸಲೇಂ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ನ್ಯಾಯಮೂರ್ತಿ ಅವಿಟಾಲ್ ಚೆನ್‌ ಆದೇಶಿಸಿದ್ದಾರೆ.

ಪ್ರಧಾನಿ ಕಚೇರಿಯಲ್ಲಿ ಅಡುಗೆ ಮಾಡುವ ಸಿಬ್ಬಂದಿ ಇದ್ದರೂ ಸಾರಾ ಅವರು ಕೆಟರಿಂಗ್‌ ಸಂಸ್ಥೆಯೊಂದರಿಂದ ಊಟ ತರಿಸಿಕೊಂಡು ಬೊಕ್ಕಸಕ್ಕೆನಷ್ಟ ಉಂಟು ಮಾಡಿದ್ದರುಎಂದು ಆರೋಪಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.