ADVERTISEMENT

ಭಾರತ–ಪಾಕಿಸ್ತಾನ ನಡುವಿನ ಮಾತುಕತೆಗೆ ಸೌದಿ ಒಲವು

ಪಿಟಿಐ
Published 9 ಮೇ 2021, 9:23 IST
Last Updated 9 ಮೇ 2021, 9:23 IST
ಜೆಡ್ಡಾಕ್ಕೆ ಬಂದ ಇಮ್ರಾನ್‌ ಖಾನ್‌ ಅವರನ್ನು ಸ್ವಾಗತಿಸಿದ ಸೌದಿ ರಾಜಕುಮಾರ ಮಹಮ್ಮದ್‌ ಬಿನ್‌ ಸಲ್ಮಾನ್‌
ಜೆಡ್ಡಾಕ್ಕೆ ಬಂದ ಇಮ್ರಾನ್‌ ಖಾನ್‌ ಅವರನ್ನು ಸ್ವಾಗತಿಸಿದ ಸೌದಿ ರಾಜಕುಮಾರ ಮಹಮ್ಮದ್‌ ಬಿನ್‌ ಸಲ್ಮಾನ್‌   

ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರ ಸಹಿತ ಬಗೆಹರಿಯದೆ ಉಳಿದಿರುವ ಹಲವು ವಿಷಯಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮಾತುಕತೆಗೆ ಮಹತ್ವ ನೀಡಬೇಕು ಎಂದು ಸೌದಿ ಆರೇಬಿಯಾ ಹೇಳಿದೆ.

ಸೌದಿ ಅರೇಬಿಯಾದ ಪ್ರವಾಸದಲ್ಲಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ರಾಜಕುಮಾರ ಮಹಮ್ಮದ್‌ ಬಿನ್‌ ಸಲ್ಮಾನ್‌ ಈ ನಿಟ್ಟಿನಲ್ಲಿ ಹೊರಡಿಸಿರುವ ಜಂಟಿ ಹೇಳಿಕೆಯನ್ನು ಪಾಕಿಸ್ತಾನದ ವಿದೇಶಾಂಗ ಕಚೇರಿ ಬಿಡುಗಡೆ ಮಾಡಿದೆ.

‘ಕಾಶ್ಮೀರ ಗಡಿಯಲ್ಲಿ ಉದ್ನಿಗ್ನತೆ ಶಮನಗೊಳಿಸಲು ಭಾರತ ಮತ್ತು ಪಾಕಿಸ್ತಾನಗಳು ಕದನ ವಿರಾಮದ ಎಲ್ಲಾ ಒಪ್ಪಂದಗಳನ್ನು ಪಾಲಿಸಲು ಸಮ್ಮತಿ ಸೂಚಿಸಿರುವುದು ಸ್ವಾಗತಾರ್ಹ’ ಎಂದು ಸೌದಿ ರಾಜಕುಮಾರ ಹೇಳಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.