ADVERTISEMENT

ನೇಪಾಳದಲ್ಲಿ ಶಾಲಾ ಕಟ್ಟಡಗಳಿಗೆ ಭಾರತದ ನೆರವು

ಪಿಟಿಐ
Published 29 ನವೆಂಬರ್ 2021, 14:28 IST
Last Updated 29 ನವೆಂಬರ್ 2021, 14:28 IST
   

ಕಠ್ಮಂಡು: ಭಾರತದ ಹಣಕಾಸಿನ ನೆರವಿನೊಂದಿಗೆ ನೇಪಾಳದದಾರ್ಚುಲಾ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಎರಡು ಶಾಲೆಗಳನ್ನು ಸೋಮವಾರ ಉದ್ಘಾಟಿಸಲಾಗಿದೆ ಎಂದು ಭಾರತದ ರಾಯಭಾರ ಕಚೇರಿ ತಿಳಿಸಿದೆ.

‘ಭಾರತದ ನೆರವಿನೊಂದಿಗೆ ತೊಂದರೆಗಳಾದ ವಿದ್ಯಾರ್ಥಿಗಳಿಗಾಗಿ ನೇಪಾಳದಲ್ಲಿ ಎರಡು ಶಾಲೆಗಳನ್ನು ಕಟ್ಟಲಾಗಿದೆ. ಕಳಂಗಾದ ತಿಂಕರ್‌ನಲ್ಲಿ ಮೋತಿ ಮಹಿಳಾ ಸಂಘ ಪ್ರಾಥಮಿಕ ಶಾಲೆ ಮತ್ತು ಮಹಾಕಾಳಿಯಲ್ಲಿ ಮಲ್ಲಿಕಾರ್ಜುನ ಮಾದರಿ ಪ್ರೌಢ ಶಿಕ್ಷಣ ಶಾಲೆಯನ್ನು ಕ್ರಮವಾಗಿ ₹ 1.27 ಕೋಟಿ ಹಾಗೂ ₹ 2.3 ಕೋಟಿ ವೆಚ್ಚದೊಂದಿಗೆ ನಿರ್ಮಿಸಲಾಗಿದೆ’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT