ADVERTISEMENT

ಹಣದಿಂದ ಸಂತೋಷ ಖರೀದಿಸಬಹುದು: ಅಧ್ಯಯನ ವರದಿ

ಐಎಎನ್ಎಸ್
Published 13 ಮಾರ್ಚ್ 2023, 15:23 IST
Last Updated 13 ಮಾರ್ಚ್ 2023, 15:23 IST
   

ನ್ಯೂಯಾರ್ಕ್: ಹೆಚ್ಚು ಹಣ ಸಂಪಾದಿಸಿದಾಗ ಜನ ಹೆಚ್ಚು ಸಂತೋಷವಾಗುತ್ತಾರೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದ್ದು, ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ಪ್ರಬಲ ನಂಬಿಕೆಯೊಂದು ಸುಳ್ಳಾಗಿದೆ.

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಹೆಚ್ಚುತ್ತಿರುವ ಸಂತೋಷದ ಮಟ್ಟಕ್ಕೆ ದೊಡ್ಡ ಮಟ್ಟದ ಆದಾಯ ಗಳಿಕೆ ಪ್ರಮುಖ ಕಾರಣವಾಗಿದೆ.

ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ‌ಸಂಶೋಧಕರಾದ ಡೇನಿಯಲ್ ಕಾಹ್ನೆಮನ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಮ್ಯಾಥ್ಯೂ ಕಿಲ್ಲಿಂಗ್ಸ್‌ವರ್ತ್, ಅಮೆರಿಕದಲ್ಲಿ ವಾಸಿಸುತ್ತಿರುವ 18–65 ವಯಸ್ಸಿನ ನಡುವಿನ, ವರ್ಷಕ್ಕೆ ಕನಿಷ್ಠ $10,000 ಕುಟುಂಬದ ಆದಾಯ ಹೊಂದಿರುವ 33,391 ಜನರನ್ನು ಈ ಸಮೀಕ್ಷೆಗಾಗಿ ಮಾತನಾಡಿಸಿದ್ದಾರೆ.

ADVERTISEMENT

ಕನಿಷ್ಠ ಸಂತೋಷದ ಗುಂಪಿನಲ್ಲಿ, $100,000 ವರೆಗೆ ಆದಾಯ ಗಳಿಸುತ್ತಿರುವವರಿದ್ದು, ಅವರ ಸಂತೋಷವು ಆದಾಯದೊಂದಿಗೆ ಏರಿಕೆಯಾಗಿದೆ. ನಂತರ ಆದಾಯವು ಹೆಚ್ಚಾದಂತೆ ಸಂತೋಷ ಹೆಚ್ಚಾಗಿಲ್ಲ. ಮಧ್ಯಮ ಶ್ರೇಣಿಯಲ್ಲಿ, ಸಂತೋಷವು ಆದಾಯಕ್ಕೆ ಸಮನಾಗಿ ಹೆಚ್ಚಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

‘ಇದನ್ನು ಸರಳವಾಗಿ ಹೇಳುವುದಾದರೆ, ಹಲವರು ದೊಡ್ಡ ಆದಾಯದೊಂದಿಗೆ ಹೆಚ್ಚಿನ ಸಂತೋಷ ಪಡೆಯುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಕಿಲ್ಲಿಂಗ್ಸ್‌ವರ್ತ್ ಹೇಳಿದರು.

‘ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಆದರೆ ಅತೃಪ್ತಿ ಹೊಂದಿರುವ ಜನರು ಇದಕ್ಕೆ ಹೊರತಾಗಿದ್ದಾರೆ. ಉದಾಹರಣೆಗೆ, ಶ್ರೀಮಂತರಾಗಿದ್ದು, ಚಿಂತೆಯಲ್ಲಿದ್ದರೆ, ಹೆಚ್ಚಿನ ಹಣ ಸಂಪಾದನೆ ಸಂತೋಷಕ್ಕೆ ಸಹಾಯ ಮಾಡುವುದಿಲ್ಲ. ಉಳಿದ ಎಲ್ಲರಿಗೂ, ವಿಭಿನ್ನ ಹಂತಗಳಲ್ಲಿ ಹೆಚ್ಚಿನ ಹಣ ಹೆಚ್ಚಿನ ಸಂತೋಷದೊಂದಿಗೆ ಸಂಬಂಧ ಹೊಂದಿದೆ’ ಎಂದು ಅವರು ತಿಳಿಸಿದರು.

ಒಂದು ವರ್ಗಕ್ಕೆ ಹೆಚ್ಚು ಹಣ ಬಂದಂತೆ ಸಂತೋಷ ಹೆಚ್ಚುತ್ತಲೇ ಇರುತ್ತದೆ. ಆದರೆ ಒಂದು ನಿರ್ದಿಷ್ಟ ಆದಾಯದ ಮಿತಿಯವರೆಗೆ ಮಾತ್ರ, ನಂತರ ಇದು ಮುಂದುವರಿಯುವುದಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.