ADVERTISEMENT

ಮೆಡಿಟರೇನಿಯನ್‌ನಲ್ಲಿ ಏರಿದ ಉಷ್ಣತೆ: ವಿಜ್ಞಾನಿಗಳ ಎಚ್ಚರಿಕೆ

ಏಜೆನ್ಸೀಸ್
Published 17 ಆಗಸ್ಟ್ 2022, 14:53 IST
Last Updated 17 ಆಗಸ್ಟ್ 2022, 14:53 IST

ಮ್ಯಾಡ್ರಿಡ್‌: ಜಾಗತಿಕವಾಗಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಬಿಸಿಗಾಳಿ ಬೀಸುತ್ತಿದ್ದು, ಮೆಡಿಟರೇನಿಯನ್‌ ಸಮುದ್ರದ ಮೇಲೆ ಭೀಕರ ಪರಿಣಾಮಗಳು ಉಂಟಾಗುತ್ತಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಬಾರ್ಸಿಲೋನಾದಿಂದ ಟೆಲ್‌ ಅವೀವ್‌ ವ್ಯಾಪ್ತಿಯಲ್ಲಿಈ ವರ್ಷ ತಾಪಮಾನವು 3ರಿಂದ 5 ಡಿಗ್ರಿ ಸೆಲ್ಸಿಯನ್ಸ್‌ನಷ್ಟು ಏರಿಕೆಯಾಗಿದೆ. ಇದರಿಂದ ಕೆಲ ದಿನಗಳಲ್ಲಿ ನೀರಿನ ಉಷ್ಣತೆ 30 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದಿದೆ.

ಪ್ರಸಕ್ತ ಬೇಸಿಗೆಯಲ್ಲಿ ಮೆಡಿಟರೇನಿಯನ್‌ ಸಮುದ್ರದ ಸುತ್ತಮುತ್ತಲಿರುವ ಯುರೋಪಿನ ವಿವಿಧ ದೇಶಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿರುವುದು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಹೆಚ್ಚುತ್ತಿರುವ ಸಮುದ್ರದ ಉಷ್ಣತೆ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ADVERTISEMENT

‘ಮೆಡಿಟರೇನಿಯನ್‌ ಸಮುದ್ರದ ಉಷ್ಣತೆಯಲ್ಲಿ ಏರಿಕೆಯಾಗುತ್ತಿರುವುದು ಗಂಭೀರ ವಿಷಯವಾಗಿದ್ದು, ಈ ಕುರಿತು ತೀವ್ರವಾಗಿ ಚಿಂತಿಸಬೇಕಾದ ಅಗತ್ಯವಿದೆ. ಹವಾಮಾನಕ್ಕೆ ಸಂಬಂಧಿಸಿದಂತೆ ತುರ್ತಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಎಲ್ಲವೂ ನಮ್ಮ ಕೈ ಮೀರಬಹುದು’ ಎಂದು ಬಾರ್ಸಿಲೋನಾದ ಸಮುದ್ರ ವಿಜ್ಞಾನಗಳ ಸಂಸ್ಥೆಯ ಸಂಶೋಧಕ ಜೋಕ್ವಿಮ್‌ ಗರ್ರಾಬೌ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.