ADVERTISEMENT

ಹೆಜ್ಜೆ ಗುರುತು ಆಧರಿಸಿ ವೇಗದ ಡೈನೊಸಾರ್‌ ಪತ್ತೆ ಮಾಡಿದ ಬ್ರೆಜಿಲ್‌ ವಿಜ್ಞಾನಿಗಳು

ರಾಯಿಟರ್ಸ್
Published 24 ನವೆಂಬರ್ 2023, 13:41 IST
Last Updated 24 ನವೆಂಬರ್ 2023, 13:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸಾವೊ ಪಾಲೊ: ಶಿಲಾಯುಗದಲ್ಲಿದ್ದ ಮರುಭೂಮಿಯಲ್ಲಿ ಅತ್ಯಂತ ವೇಗವಾಗಿ ಓಡುತ್ತಿದ್ದ ಡೈನೊಸಾರ್‌ನ ಹೊಸ ತಳಿಯನ್ನು ಅದರ ಹೆಜ್ಜೆ ಗುರುತು ಆಧರಿಸಿ ಪತ್ತೆ ಮಾಡಿರುವುದಾಗಿ ಬ್ರೆಜಿಲ್‌ನ ಭೂವಿಜ್ಞಾನಿಗಳು ಹೇಳಿದ್ದಾರೆ.

ಇದನ್ನು ‘ಫರ್ಲೊಚಿನಸ್‌ ರ‍್ಯಾಪಿಡಸ್‌’ ಎಂದು ಹೆಸರಿಸಲಾಗಿದೆ. ಇದೊಂದು ಚಿಕ್ಕ ಗಾತ್ರದ ಮಾಂಸಾಹಾರಿ ಪ್ರಾಣಿಯಾಗಿದ್ದು, ಸುಮಾರು ಮೂರು ಅಡಿ ಎತ್ತರ ಇರುವ ಟಿಟ್ಟಿಬ (ಸೆರಿಮಾ) ಪಕ್ಷಿಯ ಗಾತ್ರವನ್ನು ಹೋಲುತ್ತದೆ ಎಂದು ಕ್ರಿಟೇಶಿಯಸ್‌ ರಿಸರ್ಚ್ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ADVERTISEMENT

‘ಇದರ ಹೆಜ್ಜೆ ಗುರುತುಗಳ ಅಂತರ ಬಹಳಷ್ಟಿದೆ. ಇದರಿಂದ ಇದೊಂದು ಅತ್ಯಂತ ವೇಗವಾಗಿ ಓಡುವ ಪ್ರಾಣಿ ಎಂಬುದು ಸ್ಪಷ್ಟವಾಗಿದೆ. ಜತೆಗೆ ಈ ಸರಿಸೃಪವು ಪ್ರಾಚೀನ ಕಾಲದ ದಿಬ್ಬಗಳ ಮೇಲೆ ಅತ್ಯಂತ ವೇಗವಾಗಿ ಓಡುತ್ತಿದ್ದವು ಎಂದು ಅಂದಾಜಿಸಲಾಗಿದೆ’ ಎಂದು ಹೇಳಲಾಗಿದೆ.

ಆರಂಭಿಕ ಶಿಲಾಯುಗವು 10ರಿಂದ 14 ಕೋಟಿ ವರ್ಷಗಳ ಹಿಂದೆ ಇದ್ದು, ಆ ಕಾಲಘಟ್ಟದಲ್ಲಿ ಫರ್ಲೊಚಿನಸ್‌ ರ‍್ಯಾಪಿಡಸ್‌ ಇದ್ದವು. ಈ ಹಜ್ಜೆ ಗುರುತುಗಳನ್ನು ಇಟಲಿಯ ಪಾದ್ರಿ ಹಾಗೂ ಪ್ರಾಜ್ಞೀವಶಾಸ್ತ್ರಜ್ಞ ಸೇರಿ ಸಾವೊ ಪಾಲೊನಲ್ಲಿರುವ ಅರೆರಾಕ್ವೆರಾದಲ್ಲಿ 1980ರಲ್ಲಿ ಪತ್ತೆ ಮಾಡಿದ್ದರು. 1984ರಲ್ಲಿ ಸಂಗ್ರಹಿಸಿದ ಹೆಜ್ಜೆ ಗುರುತುಗಳಲ್ಲಿ ಒಂದನ್ನು ಬ್ರೆಜಿಲ್‌ನ ಭೂವಿಜ್ಞಾನ ವಸ್ತು ಸಂಗ್ರಹಾಲಯಕ್ಕೆ ನೀಡಿದ್ದರು.

ಈ ಹೆಜ್ಜೆ ಗುರುತುಗಳು ಡೈನೊಸಾರ್‌ನ ಹೆಜ್ಜೆಗಳಿಗಿಂತ ಭಿನ್ನವಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.