ADVERTISEMENT

ಕೋವಿಡ್‌ಗೆ ಚೀನಾ ಕಾರಣ: ದಾವೆ ಹೂಡಲು ಜನರಿಗೆ ಅನುಮತಿ ನೀಡುವ ಮಸೂದೆಗೆ ಒಪ್ಪಿಗೆ

ಕೊರೊನಾ ಸೋಂಕು ಪ್ರಸರಣವಾಗಲು ಚೀನಾ ಕಾರಣ: ಆರೋಪ

ಪಿಟಿಐ
Published 21 ಜುಲೈ 2020, 15:55 IST
Last Updated 21 ಜುಲೈ 2020, 15:55 IST
   

ವಾಷಿಂಗ್ಟನ್‌:ಕೊರೊನಾ ಸೋಂಕು ಎಲ್ಲೆಡೆ ಪ್ರಸರಣವಾಗಲು ಚೀನಾ ಕಾರಣ ಎಂದು ದೂರಿ ಆ ದೇಶದ ವಿರುದ್ಧ ಅಮೆರಿಕ ಪ್ರಜೆಗಳು ಕೋರ್ಟ್‌ನಲ್ಲಿ ದಾವೆ ಹೂಡಲು ಅನುಮತಿ ನೀಡುವ ಮಸೂದೆಯೊಂದನ್ನು ರಿಪಬ್ಲಿಕ್‌ ಪಾರ್ಟಿ ಸಂಸದರು ಸೆನೆಟ್‌ನಲ್ಲಿ ಮಂಡಿಸಿದ್ದಾರೆ.

ಮಸೂದೆ ಅಂಗೀಕಾರಗೊಂಡ ನಂತರ ಜಾರಿಯಾಗಲಿರುವ ‘ದಿ ಸಿವಿಲ್‌ ಜಸ್ಟಿಸ್‌ ಫಾರ್‌ ವಿಕ್ಟಿಮ್ಸ್‌ ಆಫ್‌ ಕೋವಿಡ್‌ ಆ್ಯಕ್ಟ್‌ ಎಂಬ ಕಾಯ್ದೆಯಡಿ ಚೀನಾ ವಿರುದ್ಧ ಸಲ್ಲಿಕೆಯಾಗುವ ದೂರುಗಳನ್ನು ಅಮೆರಿಕದ ಕೋರ್ಟ್‌ಗಳು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೇ, ಚೀನಾದ ಆಸ್ತಿಗಳನ್ನು ಜಪ್ತಿ ಮಾಡಲು ಸಹ ಕೋರ್ಟ್‌ಗಳಿಗೆ ಅಧಿಕಾರ ದೊರೆಯಲಿದೆ.

ಸೆನೆಟರ್‌ಗಳಾದ ಮಾರ್ಥಾ ಮ್ಯಾಕ್‌ಸಲ್ಲಿ, ಮಾರ್ಷಾ ಬ್ಲ್ಯಾಕ್‌ಬರ್ನ್‌, ಟಾಮ್‌ ಕಾಟನ್‌, ಜೋಷ್‌ ಹಾಲೆ, ಮೈಕ್‌ ರೌಂಡ್ಸ್‌ ಹಾಗೂ ಥಾಮ್ ಟಿಲ್ಲಿಸ್ ಈ ಮಸೂದೆಯನ್ನು ಮಂಡಿಸಿದ್ದಾರೆ.

ADVERTISEMENT

‘ಕೋವಿಡ್‌ನಿಂದಾಗಿ ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಅಮೆರಿಕ ಪ್ರಜೆಗಳಿಗೆ ಚೀನಾ ಪರಿಹಾರ ನೀಡಬೇಕು’ ಎಂದು ಸೆನೆಟರ್‌ ಮ್ಯಾಕ್‌ಸಲ್ಲಿ ಪ್ರತಿಪಾದಿಸಿದರು.

‘ಕೊರೊನಾ ಸೋಂಕು ಕುರಿತು ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ, ಇತರ ದೇಶಗಳು ಸಂಕಷ್ಟ ಎದುರಿಸುವ ಸಂದರ್ಭದಲ್ಲಿ ತಾನು ಲಾಭ ಮಾಡಿಕೊಳ್ಳುತ್ತಿರುವ ಚೀನಾದ ಕಮ್ಯುನಿಸ್ಟ್‌ ಪಾರ್ಟಿಗೆ ತಕ್ಕ ಪಾಠ ಕಲಿಲೇಬೇಕು’ ಎಂದು ಮತ್ತೊಬ್ಬ ಸೆನೆಟರ್‌ ಬ್ಲ್ಯಾಕ್‌ ಬರ್ನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.