ADVERTISEMENT

ಪಾಕಿಸ್ತಾನ: ಬ್ರಿಟನ್‌ಗೆ ಪ್ರಯಾಣಿಸದಂತೆ ಶಹಬಾಜ್‌ ಷರೀಫ್‌ಗೆ ತಡೆ

ಪಿಟಿಐ
Published 8 ಮೇ 2021, 9:44 IST
Last Updated 8 ಮೇ 2021, 9:44 IST
ಶಹಬಾಜ್‌ ಷರೀಫ್‌
ಶಹಬಾಜ್‌ ಷರೀಫ್‌   

ಲಾಹೋರ್‌: ಬ್ರಿಟನ್‌ಗೆ ತೆರಳದಂತೆ ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಶಹಬಾಜ್‌ ಷರೀಫ್‌ ಅವರನ್ನು ಫೆಡರಲ್‌ ತನಿಖಾ ಸಂಸ್ಥೆಯ(ಎಫ್‌ಐಎ) ಅಧಿಕಾರಿಗಳು ಶನಿವಾರ ತಡೆದಿದ್ದಾರೆ.

‘ಲಾಹೋರ್‌ ಹೈಕೋರ್ಟ್‌, ಶಹಬಾಜ್‌ ಷರೀಫ್‌ಗೆ ವೈದ್ಯಕೀಯ ಚಿಕಿತ್ಸೆಗಾಗಿ ಬ್ರಿಟನ್‌ಗೆ ಪ್ರಯಾಣಿಸಲು ಶುಕ್ರವಾರ ಷರತ್ತುಬದ್ಧ ಅನುಮತಿ ನೀಡಿದೆ. ಈ ವೇಳೆ ಎಫ್‌ಐಎನ ಇಬ್ಬರು ಅಧಿಕಾರಿಗಳು ಕೂಡ ಇದ್ದರು. ನ್ಯಾಯಾಲಯಕ್ಕೆ ಶಹಬಾಜ್‌ ಪ್ರಯಾಣಿಸುವ ವಿಮಾನದ ಸಂಖ್ಯೆಯನ್ನು ಹೇಳಲಾಗಿತ್ತು’ ಎಂದುಎಂದು ಪಿಎಂಎಲ್‌–ಎನ್‌ ವಕ್ತಾರೆ ಮರಿಯಮ್ಮ ಔರಂಗಜೇಬ್‌ ಹೇಳಿದರು.

‘ಶಹಬಾಜ್‌ ಅವರು ಲಾಹೋರ್‌ ವಿಮಾನ ನಿಲ್ದಾಣದಿಂದ ಕತಾರ್‌ ಮೂಲಕ ಬ್ರಿಟನ್‌ಗೆ ಶನಿವಾರ ಮುಂಜಾನೆ ತೆರಳಲಿದ್ದರು. ಆದರೆ ಎಫ್‌ಐಎ, ಶಹಬಾಜ್‌ ಅವರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಅವರನ್ನು ಪಾಕಿಸ್ತಾನ ತೊರೆಯದಂತೆ ತಡೆ ಹಿಡಿದಿದೆ’ ಎಂದು ದೂರಿದ್ದಾರೆ.

ADVERTISEMENT

ಶಹಬಾಜ್‌ ಷರೀಫ್‌ ಹೆಸರು ಇನ್ನೂ ಕಪ್ಪು ಪಟ್ಟಿಯಲ್ಲಿದೆ ಎಂಬ ಕಾರಣ ನೀಡಿ ಅವರನ್ನು ವಾಪಸ್‌ ಕಳುಹಿಸಲಾಯಿತು. ಕಪ್ಪು ಪಟ್ಟಿಯಿಂದ ಶಹಬಾಜ್‌ ಅವರ ಹೆಸರನ್ನು ಗೃಹ ಸಚಿವಾಲಯ ತೆಗೆದುಹಾಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.