ADVERTISEMENT

ಅಕ್ರಮ ಹಣ ವರ್ಗಾವಣೆ: ಷರೀಫ್‌ ಎನ್‌ಎಬಿ ವಶಕ್ಕೆ

ಪಿಟಿಐ
Published 11 ಅಕ್ಟೋಬರ್ 2019, 16:13 IST
Last Updated 11 ಅಕ್ಟೋಬರ್ 2019, 16:13 IST
ನವಾಜ್‌ ಷರೀಫ್‌
ನವಾಜ್‌ ಷರೀಫ್‌   

ಲಾಹೋರ್‌: ಜೈಲು ಸೇರಿರುವಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಅಕ್ರಮ ಹಣ ವರ್ಗಾವಣೆಯ ಮತ್ತೊಂದು ಪ್ರಕರಣದ ವಿಚಾರಣೆಗಾಗಿ 14 ದಿನಗಳವರೆಗೆ ನ್ಯಾಷನಲ್‌ ಅಕೌಂಟಬಿಲಿಟಿ ಬ್ಯುರೊ (ಎನ್‌ಎಬಿ) ವಶಕ್ಕೆ ನೀಡಲಾಗಿದೆ.

ಚೌಧರಿ ಶುಗರ್‌ ಮಿಲ್ಸ್‌ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗಾಗಿ ಷರೀಫ್‌ ಅವರನ್ನು 15 ದಿನಗಳ ಕಾಲ ವಶಕ್ಕೆ ನೀಡುವಂತೆ ಕೋರಿ ಎನ್‌ಎಬಿ ಅರ್ಜಿ ಸಲ್ಲಿಸಿತ್ತು.

ಚೌಧರಿ ಶುಗರ್‌ ಮಿಲ್ಸ್‌ ಪ್ರಕರಣದಲ್ಲಿ ಷರೀಫ್‌ ಮತ್ತು ಅವರ ಮಗಳು ಮರಿಯಮ್‌ ನೇರ ಫಲಾನುಭವಿಗಳು. ಷರೀಫ್‌ ಸೋದರಸಂಬಂಧಿ ಯೂಸುಫ್ ಅಬ್ಬಾಸ್ ಸಕ್ಕರೆ ಕಾರ್ಖಾನೆಯಲ್ಲಿ ₹1.2 ಕೋಟಿ ಮೊತ್ತದ ಷೇರುಗಳನ್ನು ಹೊಂದಿದ್ದಾರೆ ಎಂದು ಎನ್‌ಎಬಿ ಆರೋಪಿಸಿದೆ.

ADVERTISEMENT

ಅಲ್‌ಅಝೀಜಿಯಾ ಸ್ಟೀಲ್‌ ಮಿಲ್‌ ಸ್ಥಾಪನೆಗಾಗಿ ಬೃಹತ್‌ ಮೊತ್ತದ ಲಾಭ ಪಡೆದ ಪ್ರಕರಣದಲ್ಲಿ ಸಿಲುಕಿರುವ ಷರೀಫ್‌ ಏಳು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.ಅವೆನ್‌ಫೀಲ್ಡ್‌ ಪ್ರಾಪರ್ಟೀಸ್‌, ಫ್ಲ್ಯಾಗ್‌ಷಿಪ್‌ ಇನ್ವೆಸ್ಟ್‌ಮೆಂಟ್‌ ಮತ್ತು ಅಲ್‌ ಅಝಿಜಿಯಾ ಸ್ಟೀಲ್‌ ಮಿಲ್ಸ್‌ ಕಂಪನಿಗಳು ಷರೀಫ್‌ ಕುಟುಂಬದ ವಿರುದ್ಧ ಭ್ರಷ್ಟಾಚಾರ ವಿರೋಧಿ ಕಾನೂನಿನ ಅನ್ವಯ ಮೂರು ಪ್ರಕರಣಗಳನ್ನು ದಾಖಲಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.